ಅದು ಅವರ ವೈಯಕ್ತಿಕ ಅನಿಸಿಕೆ: ಸಾಧ್ವಿ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ!

By Web DeskFirst Published Apr 19, 2019, 6:49 PM IST
Highlights

ಸಾಧ್ವಿ ಪ್ರಜ್ಞಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಬಿಜೆಪಿ| ಮುಂಬೈ ದಾಳಿಯ ಹುತಾತ್ಮ ಹೇಮಂತ್ ಕರ್ಕರೆ ಕುರಿತಾದ ಸಾಧ್ವಿ ಹೇಳಿಕೆ| ‘ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ’| ಹೇಮಂತ್ ಕರ್ಕರೆ ಅವರ ಬಲಿದಾನವನ್ನು ಪಕ್ಷ  ಗೌರವಿಸುತ್ತದೆ ಎಂದ ಬಿಜೆಪಿ|

ನವದೆಹಲಿ(ಏ.19): ಮುಂಬೈ ದಾಳಿಯಲ್ಲಿ ಹುತಾತ್ಮರಾದ ATS ಮುಖ್ಯಸ್ಥ ಹೇಮಂತ್ ಕರ್ಕರೆ ಕುರಿತು, ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ.

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಜೆಪಿ, ಹೇಮಂತ್ ಕರ್ಕರೆ ಅವರ ಬಲಿದಾನವನ್ನು ಪಕ್ಷ  ಗೌರವಿಸುತ್ತದೆ ಎಂದು ಹೇಳಿದೆ. 

BJP releases statement over the remarks made against late Hemant Karkare by BJP LS candidate for Bhopal, Pragya Thakur; says, "BJP considers him a martyr. This is Sadhvi Pragya's personal statement which she might have given because of the mental & physical torture she had faced" pic.twitter.com/CNr5n5EbDl

— ANI (@ANI)

26/11 ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಉಗ್ರ ನಿಗ್ರಹ ದಳ(ATS) ಅಧಿಕಾರಿ ಹೇಮಂತ್ ಕರ್ಕರೆ, ನನ್ನ ಶಾಪದಿಂದಾಗಿ ತಮ್ಮ ಕರ್ಮದ ಫಲ ಉಂಡಿದ್ದಾರೆ ಎಂದು ಭೋಪಾಲ್ ಲೋಕಸಭಾ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!