RSS ಕೂಡ ಮುಳುಗುತ್ತಿರುವ ಬಿಜೆಪಿಯ ಕೈಬಿಟ್ಟಿದೆ: ಮಾಯಾವತಿ!

Published : May 14, 2019, 03:36 PM ISTUpdated : May 14, 2019, 05:32 PM IST
RSS ಕೂಡ ಮುಳುಗುತ್ತಿರುವ ಬಿಜೆಪಿಯ ಕೈಬಿಟ್ಟಿದೆ: ಮಾಯಾವತಿ!

ಸಾರಾಂಶ

ಬಿಜೆಪಿಯನ್ನು ಮುಳುಗುತ್ತಿರುವ ಹಡಗಿಗೆ ಹೋಲಿಸಿದ ಮಾಯಾವತಿ| ಆರ್‌ಎಸ್‌ಎಸ್‌ ಕೂಡ ಬಿಜೆಪಿ ಕೈಬಿಟ್ಟಿದೆ ಎಂದ ಬಿಎಸ್‌ಪಿ ಮುಖ್ಯಸ್ಥೆ| ‘ಬಿಜೆಪಿ 2014ರಲ್ಲಿ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ’| ‘ಸಾರ್ವಜನಿಕರಿಂದ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಪಕ್ಷದಿಂದ ದೂರ ಸರಿದ ಆರ್‌ಎಸ್‌ಎಸ್‌’|  

ಲಕ್ನೋ(ಮೇ.14): ಬಿಜೆಪಿ ಪರಿಸ್ಥಿತಿ ಮುಳುಗುತ್ತಿರುವ ಹಡಗಿನಂತಾಗಿದ್ದು, ಆರ್‌ಎಸ್‌ಎಸ್‌ ಕೂಡ ಆ ಪಕ್ಷದ ಕೈ ಬಿಟ್ಟಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

2014ರಲ್ಲಿ ಬಿಜೆಪಿ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿರುವ ಆರ್‌ಎಸ್‌ಎಸ್ ಕೂಡ ಬಿಜೆಪಿಯಿಂದ ದೂರ ಸರಿಯುತ್ತಿದೆ ಎಂದು ಮಾಯಾವತಿ ಹೇಳಿದ್ದಾರೆ.

ಸಾರ್ವಜನಿಕರಿಂದ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ಆರ್‌ಎಸ್‌ಎಸ್ ಬಿಜೆಪಿಯಿಂದ ದೂರ ಸರಿಯುತ್ತಿದೆ ಎಂದು ಮಾಯಾವತಿ ಕುಹುಕವಾಡಿದ್ದಾರೆ. ಬಿಜೆಪಿ ಪರವಾಗಿ ಯಾವ ಆರ್‌ಎಸ್‌ಎಸ್ ನಾಯಕರೂ ಪ್ರಚಾರ ನಡೆಸದಿರುವುದೇ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!