ದೇಶವನ್ನೇಕೆ ಇಬ್ಭಾಗ ಮಾಡ್ತಿರಿ?: ಕಮಲ್ ಹೇಳಿಕೆ ಖಂಡಿಸಿದ ವಿವೇಕ್!

Published : May 14, 2019, 01:39 PM IST
ದೇಶವನ್ನೇಕೆ ಇಬ್ಭಾಗ ಮಾಡ್ತಿರಿ?: ಕಮಲ್ ಹೇಳಿಕೆ ಖಂಡಿಸಿದ ವಿವೇಕ್!

ಸಾರಾಂಶ

‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ’| ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿದ ವಿವೇಕ್ ಒಬೆರಾಯ್| ದೇವನ್ನು ಇಬ್ಭಾಗ ಮಾಡುವ ಹೇಳಿಕೆ ನೀಡುವುದು ಸಲ್ಲ ಎಂದ ವಿವೇಕ್ ಒಬೆರಾಯ್| ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಕುರಿತು ಕಮಲ್ ಉಲ್ಲೇಖ| ಭಯೋತ್ಪಾದನೆಯನ್ನು ಧರ್ಮದ ಆಧಾರದ ಮೇಲೆ ನೋಡುವುದಿಲ್ಲ ಎಂದ ವಿವೇಕ್|   

ಮುಂಬೈ(ಮೇ.14): ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಓರ್ವ ಹಿಂದೂ ಎಂದು ನಾಥೂರಾಮ್ ಗೋಡ್ಸೆ ಕುರಿತು ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ಅವರನ್ನು ಬಾಲಿವುಡ್ ನಟ ವಿವೇಕ್ ಒಬೆರಾಯ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿರುವ ವಿವೇಕ್ ಒಬೆರಾಯ್, ವ್ಯಕ್ತಿಯೋರ್ವನ ದುಷ್ಕೃತ್ಯವನ್ನು ಧರ್ಮದ ಮೇಲೆ ಆಧಾರದ ಮೇಲೆ ನೋಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಧರ್ಮದ ಆಧಾರದ ಮೇಲೆ ದೇಶವನ್ನು ಇಬ್ಭಾಗ ಮಾಡುವ ಇಂತಹ ಹೇಳಿಕೆಗಳನ್ನು ನೀಡುವ ಅವಶ್ಯಕತೆಯಾದರೂ ಏನಿದೆ ಎಂದು ವಿವೇಕ್ ಪ್ರಶ್ನಿಸಿದ್ದಾರೆ.

ಭಯೋತ್ಪಾದನೆಯನ್ನು ಯಾರೂ ಧರ್ಮದೊಂದಿಗೆ ತಳಕು ಹಾಕುವುದಿಲ್ಲ ಆದರೆ ಕಮಲ್ ಹಾಸನ್ ಅವರಂತ ಹಿರಿಯ ನಟ ಇಂತಹ ಹೇಳಿಕೆ ನೀಡಿರುವುದು ಆಶ್ಚರ್ಯ ತಂದಿದೆ ಎಂದು ವಿವೇಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಕಮಲ್ ಹಾಸನ್, ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ಎಂದು ಹೇಳಿದ್ದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!