ಟೀ, ಪಕೋಡಾ ಮಾರಲು ಹೇಳುವ ಸರ್ಕಾರ ದೇಶಕ್ಕೆ ಬೇಕಿಲ್ಲ: ಮಾಯಾವತಿ

Published : Apr 24, 2019, 08:41 AM ISTUpdated : Apr 24, 2019, 08:42 AM IST
ಟೀ, ಪಕೋಡಾ ಮಾರಲು ಹೇಳುವ ಸರ್ಕಾರ ದೇಶಕ್ಕೆ ಬೇಕಿಲ್ಲ: ಮಾಯಾವತಿ

ಸಾರಾಂಶ

ಟೀ, ಪಕೋಡಾ ಮಾರಲು ಹೇಳುವ ಸರ್ಕಾರ ದೇಶಕ್ಕೆ ಬೇಕಿಲ್ಲ| ಮೋದಿ ಸರ್ಕಾರದ ವಿರುದ್ಧ ಮಾಯಾವತಿ ಗರಂ

ಲಖನೌ[ಏ.24]: ಜನವಿರೋಧಿ ನೀತಿ ಹಾಗೂ ಟೀ-ಪಕೋಡಾ ಮಾರಲು ಹೇಳುವ ಸರ್ಕಾರವನ್ನು ಈ ದೇಶದ ಯುವಕರನ್ನೊಳಗೊಂಡ ಅಕ್ಷರಸ್ಥ ಜನತೆ ಬಯಸುತ್ತಿಲ್ಲ ಎಂದು ಹೇಳುವ ಮೂಲಕ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಧಾನಿ ವಿರುದ್ಧ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿರುವ ಮಾಯಾವತಿ, ‘ದೇಶದ 130 ಕೋಟಿ ಜನ, ಅದರಲ್ಲೂ ಯುವಕರು, ನಿರುದ್ಯೋಗಿಗಳು ಟೀ-ಪಕೋಡಾ ಮಾರುವ, ಜನವಿರೋಧಿ ನೀತಿಗಳನ್ನು ಅನುಸರಿಸುವ ಸರ್ಕಾರ ಬಯಸುತ್ತಿಲ್ಲ. ಇದನ್ನು ಮೋದಿ ಅರಿತುಕೊಳ್ಳಲಿ ಎಂದಿದ್ದಾರೆ.

ಅಲ್ಲದೆ, ಮತದಾರರು ಇದನ್ನೆಲ್ಲ ಗಮನಿಸಿ ಹಕ್ಕು ಚಲಾಯಿಸಬೇಕು. ಎಂತಹ ಸರ್ಕಾರ ಬೇಕು ಎನ್ನುವುದನ್ನು ನಿರ್ಧರಿಸುವುದು ನಿಮ್ಮ ಹಕ್ಕು. ಯಾವ ಸರ್ಕಾರ ಇದ್ದರೆ ಉತ್ತಮ ಎನ್ನುವುದನ್ನು ಯೋಚಿಸಿ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!