ವಿವಿಪ್ಯಾಟ್‌ನಲ್ಲಿ ಹಾವು!: ಆತಂಕ ಸೃಷ್ಟಿ

Published : Apr 24, 2019, 08:26 AM IST
ವಿವಿಪ್ಯಾಟ್‌ನಲ್ಲಿ ಹಾವು!: ಆತಂಕ ಸೃಷ್ಟಿ

ಸಾರಾಂಶ

ಕಣ್ಣೂರು ಲೋಕ ಕ್ಷೇತ್ರದ ವಿವಿಪ್ಯಾಟ್‌ನಲ್ಲಿ ಹಾವು!: ಕೆಲಹೊತ್ತು ಆತಂಕ ಸೃಷ್ಟಿ

ಕಣ್ಣೂರು[ಏ.24]: ಹೊಲ ಗದ್ದೆಗಳಲ್ಲಿ ಹಾವು, ಚೇಳು ಅಥವಾ ಸರಿಸೃಪಗಳು ಕಂಡರೆ ಎಂಥವರಿಗೂ ಭಯವಾಗುತ್ತದೆ. ಇನ್ನು ಚುನಾವಣೆ ಮತಗಟ್ಟೆಗೆ ಹಾವು ನುಗ್ಗಿದರೆ, ಮತ ಚಲಾಯಿಸಲು ಜಮಾಯಿಸಿದ ಮತದಾರರ ಸ್ಥಿತಿ ಏನಾಗಬೇಡ?

ಹೌದು, ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್‌ ಕಂಡಕ್ಕೈ ಬೂತ್‌ನಲ್ಲಿನ ವಿವಿಪ್ಯಾಟ್‌ನಲ್ಲಿ ಸಣ್ಣ ಹಾವು ಕಾಣಿಸಿಕೊಂಡಿದೆ. ಈ ವೇಳೆ ಚುನಾವಣಾಧಿಕಾರಿಗಳು ಮತ್ತು ಮತ ಚಲಾಯಿಸಲು ಭಾರೀ ಪ್ರಮಾಣದಲ್ಲಿ ಸೇರಿದ್ದ ಮತದಾರರಲ್ಲಿ ಕೆಲಹೊತ್ತು ಆತಂಕ ಮನೆ ಮಾಡಿತ್ತು. ಆದಾಗ್ಯೂ, ಹಾವನ್ನು ಮತಯಂತ್ರದಿಂದ ಸುರಕ್ಷಿತವಾಗಿ ಹೊರತೆಗೆದು, ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

ಅಧಿಕೃತವಾಗಿ ಮತ ಚಲಾವಣೆಗೆ ಅವಕಾಶ ಮಾಡಿಕೊಡುವ ಮುನ್ನ ಅಧಿಕಾರಿಗಳು ಒಮ್ಮೆ ನಡೆಸುವ ಅಣಕು, ಮತ ಚಲಾವಣೆ ವೇಳೆ ಹಾವು ಕಾಣಿಸಿಕೊಂಡಿತ್ತು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!