ನನಗೆ ಮತ ಹಾಕಿದ ಗ್ರಾಮಕ್ಕೆ ಮಾತ್ರ ಅಭಿವೃದ್ಧಿ: ಮನೇಕಾ!

By Web DeskFirst Published Apr 16, 2019, 8:25 AM IST
Highlights

ನನಗೆ ಮತ ಹಾಕಿದ ಗ್ರಾಮಕ್ಕೆ ಮಾತ್ರ ಅಭಿವೃದ್ಧಿ: ಮನೇಕಾ! ನನಗೆ ಹೆಚ್ಚು ಮತ ಹಾಕಿದ ಗ್ರಾಮಗಳ ಎಬಿಸಿಡಿ ಆಗಿ ವಿಂಗಡಣೆ ಮಾಡುವುದಾಗಿ ಮನೇಕಾ ಗಾಂಧಿ ಹೇಳಿದ್ದಾರೆ | ವಿವಾದ ಹುಟ್ಟು ಹಾಕಿದ ಮನೇಕಾ ಗಾಂಧಿ 

ನವದೆಹಲಿ (ಏ. 16): ಇತ್ತೀಚೆಗಷ್ಟೇ ತಮಗೆ ಮತ ನೀಡದ ಮುಸ್ಲಿಂ ಮತದಾರರು ತಮಗೆ ಕೆಲಸ ಕೇಳಿಕೊಂಡು ತಮ್ಮ ಬಳಿಗೆ ಬರುವುದು ಬೇಡ ಎಂದು ಎಚ್ಚರಿಕೆ ನೀಡಿ ಸಾರ್ವಜನಿಕರ ಟೀಕೆಗೆ ಒಳಗಾಗಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಇದೀಗ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.

ಅಂಡರ್‌ವೇರ್ ಹೇಳಿಕೆ: ಕ್ಷಮೆ ಕೇಳಲು ಆಜಂ ಖಾನ್ ನಕಾರ

ಸುಲ್ತಾನ್‌ಪುರದಲ್ಲಿ ಮತಯಾಚನೆ ವೇಳೆ ಮಾತನಾಡಿದ ಅವರು, ‘ಚುನಾವಣೆ ಬಳಿಕ ನಾನು ಹೆಚ್ಚು ಮತ ಪಡೆದ ಗ್ರಾಮಗಳನ್ನು ‘ಎಬಿಸಿಡಿ’ ಎಂದು ಗುರುತಿಸುವ ಒಂದು ವ್ಯವಸ್ಥೆ ಅಳವಡಿಸಿಕೊಳ್ಳುತ್ತೇನೆ. ಈ ಪ್ರಕಾರ ಬಿಜೆಪಿಗೆ ಹೆಚ್ಚು ಮತ ಹಾಕಿದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ,’ ಎಂದರು. ಇದು ವಿವಾದದ ಕೇಂದ್ರ ಬಿಂದುವಾಗಿದೆ. ಈ ಪ್ರಕಾರ ಶೇ.80ರಷ್ಟುಮತಗಳನ್ನು ಬಿಜೆಪಿ ಹಾಕಿದ ಗ್ರಾಮಗಳನ್ನು ಎ, ಶೇ.60ರಷ್ಟುಮತ ಹಾಕಿದ ಗ್ರಾಮಗಳನ್ನು ಬಿ, ಶೇ.50ರಷ್ಟುಮತ ಹಾಕಿದ ಗ್ರಾಮಗಳನ್ನು ಸಿ ಎಂದು ಹಾಗೂ ಅದಕ್ಕಿಂತ ಕಡಿಮೆ ಹಾಕಿದ ಗ್ರಾಮಗಳನ್ನು ಡಿ ಎಂದು ಗುರುತಿಸುವುದಾಗಿ ಹೇಳಿದ್ದಾರೆ.
 

click me!