ಬಿಜೆಪಿಗೆ ಮತ ಹಾಕಿ, ಸೆಲ್ಫೀ ತೆಗೆದುಕೊಂಡ ಮತದಾರ : ಫೋಟೋ ವೈರಲ್

Published : Apr 18, 2019, 11:40 AM IST
ಬಿಜೆಪಿಗೆ ಮತ ಹಾಕಿ, ಸೆಲ್ಫೀ ತೆಗೆದುಕೊಂಡ ಮತದಾರ : ಫೋಟೋ ವೈರಲ್

ಸಾರಾಂಶ

ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಇದೇ ವೇಳೆ ಯುವಕನೋರ್ವ ಬಿಜೆಪಿ ಮತ ಚಲಾಯಿಸಿದ ಫೊಟೊ ವೈರಲ್ ಆಗಿದೆ. 

ಚಿಕ್ಕಮಗಳೂರು : ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಆರಂಭವಾಗಿದೆ. ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಮತದಾದನ ನಡೆಯುತ್ತಿದೆ. ಇತ್ತ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ವ್ಯಕ್ತಿಯೋರ್ವ ಮತದಾನ ಮಾಡಿದ ಫೊಟೊ ಒಂದು ವೈರಲ್ ಆಗಿದೆ. 

ಬಿಜೆಪಿಗೆ ಮತ ಹಾಕಿದ ವ್ಯಕ್ತಿ ಎವಿಎಂ ಫೊಟೊ ತೆಗೆದು ವೈರಲ್ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆಗೆ ಮತ ಹಾಕಿದ್ದು, ಗೌಪ್ಯತೆ ಕಾಪಾಡಬೇಕಾದ ಮತದಾನವನ್ನು ಬಹಿರಂಗ ಮಾಡಿದ್ದಾರನೆ. 

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಗೆ ಮತದಾನ ಮಾಡಿದ ಈ ಫೋಟೊ ವೈರಲ್ ಆಗಿದ್ದು, ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಹಿಂದೆಯೂ ಕೂಡ ಇದೇ ರೀತಿಯಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಮತಹಾಕಿದ ಫೊಟೊ ವೈರಲ್ ಆಗಿತ್ತು. ಅಲ್ಲದೇ ಸುಮಲತಾಗೆ ಯೋಧನೋರ್ವ ಮತ ಹಾಕಿದ ವಿಡಿಯೋ ಕೂಡ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!