ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಕೀಯ ಕಂಪನ : ನಿಜವಾಗುತ್ತಾ ಭವಿಷ್ಯ ?

Published : May 13, 2019, 11:13 AM IST
ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಕೀಯ ಕಂಪನ : ನಿಜವಾಗುತ್ತಾ ಭವಿಷ್ಯ ?

ಸಾರಾಂಶ

ಲೋಕಸಭಾ ಚುನಾವಣೆ ಭವಿಷ್ಯ ಪ್ರಕಟವಾಗಲು ಇನ್ನು 10 ದಿನ ಬಾಕಿ ಉಳಿದಿದ್ದು ಇದೇ  ವೇಳೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

ಕಲಬುರಗಿ: ಮೇ 23 ರಂದು ಲೋಕಸಭೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಇಡೀ ದೇಶದಲ್ಲೇ ಭೂಕಂಪನವಾಗಲಿದೆ. ಇನ್ನು ರಾಜ್ಯದಲ್ಲಂತೂ ಹೆಚ್ಚಿನ ಕಂಪನ ಶುರುವಾಗಲಿದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಭವಿಷ್ಯ ನುಡಿದಿದ್ದಾರೆ.

ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆಯವರಿಗೆ ನಾವು ಕೈ ಕೊಟ್ಟಿಲ್ಲ. ಪುತ್ರ ವ್ಯಾಮೋಹದಲ್ಲಿ ಅವರೇ ನಮಗೆಲ್ಲ ಕೈಕೊಟ್ಟಿದ್ದಾರೆ. 

ಪ್ರಿಯಾಂಕ್‌ಗೆ ಲೈನ್ ಕ್ಲಿಯರ್ ಮಾಡಲು ಹೋಗಿ ಹೈ.ಕ. ಭಾಗದಲ್ಲಿ ಕಾಂಗ್ರೆಸ್ ಪಕ್ಷ ಅಧೋಗತಿ ತಲುಪುವಂತೆ ಮಾಡಿದ್ದಾರೆ. ಅನೇಕರು ಒಬಿಸಿ ಮುಖಂಡರು, ಮೇಲ್ವರ್ಗದವರು ತಾವಾಗಿಯೇ ಪಕ್ಷ ಬಿಟ್ಟು ಹೋಗುವಂತೆ ಮಾಡಿದ್ದಾರೆ ಎಂದು ದೂರಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!