ಗೌತಮ್ ಗಂಭೀರ್ ಸಿಕ್ಸರ್‌ಗೆ ಧೂಳೀಪಟವಾದ AAP, ಕಾಂಗ್ರೆಸ್!

Published : May 23, 2019, 06:23 PM ISTUpdated : May 24, 2019, 03:12 PM IST
ಗೌತಮ್ ಗಂಭೀರ್ ಸಿಕ್ಸರ್‌ಗೆ ಧೂಳೀಪಟವಾದ AAP, ಕಾಂಗ್ರೆಸ್!

ಸಾರಾಂಶ

ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯ ಸಿಕ್ಸರ್‌ಗೆ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಧೂಳೀಪಟವಾಗಿದೆ. ಈಸ್ಟ್ ಡೆಲ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗೌತಮ್ ಗಂಭೀರ್, ಗೆಲುವಿನ ನಗೆ ಬೀರಿದ್ದಾರೆ. ಈಸ್ಟ್ ಡೆಲ್ಲಿ ಚುನಾವಣಾ ಫಲಿತಾಂಶದ ವಿವರ ಇಲ್ಲಿದೆ. 

ದೆಹಲಿ(ಮೇ.23): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯ ಇನ್ನಿಂಗ್ಸ್ ಭರ್ಜರಿಯಾಗಿ ಆರಂಭಗೊಂಡಿದೆ. ಬಿಜೆಪಿ ಅಭ್ಯರ್ಥಿಯಾಗಿ ಈಸ್ಟ್ ಡೆಲ್ಲಿಯಿಂದ ಸ್ಪರ್ಧಿಸಿದ ಗೌತಮ್ ಗಂಭೀರ್ 3.91 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ 2011ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಗಂಭೀರ್, ರಾಜಕಕೀಯದ ಮೊದಲ ಪ್ರಯತ್ನದಲ್ಲೇ ಗೆಲುವಿನ ಸಿಹಿ ಕಂಡಿದ್ದಾರೆ.

ಇದನ್ನೂ ಓದಿ:  ಜನತೆಯ ತೀರ್ಪು ಗೌರವಿಸುತ್ತೇವೆ: ರಾಹುಲ್ 5 ನಿಮಿಷದ "ದಿಲ್ ಕಿ ಬಾತ್'!

ಆಮ್ ಆದ್ಮಿ ಪಕ್ಷದ ಅತೀಶಿ ಮರ್ಲೆನಾ ಹಾಗೂ ಕಾಂಗ್ರೆಸ್ ಪಕ್ಷದ ಅರ್ವಿಂದರ್ ಸಿಂಗ್ ಲವ್ಲಿ ವಿರುದ್ಧ ಗೌತಮ್ ಗಂಭೀರ್‌ಗೆ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಗಂಭೀರ್ ವಿರುದ್ಧ ಗಂಭೀರ ಆರೋಪ ಮಾಡಿದ ಆಮ್ ಆದ್ಮಿ ಪಕ್ಷ ಇದೀಗ ತೀವ್ರ ಮುಖಭಂಗಕ್ಕೊಳಗಾಗಿದೆ.  ಗಂಭೀರ್ 6,96,156 ಮತ ಪಡೆದುಕೊಂಡಿದ್ದರೆ, ಕಾಂಗ್ರೆಸ್‌ನ ಅರ್ವಿಂದರ್ 3,04,934 ಮತ ಪಡೆದಿದ್ದಾರೆ.  ಇನ್ನು ಆಮ್ ಆದ್ಮಿ ಪಕ್ಷದ ಅತೀಶಿ 2,19,328 ಮತ ಪಡೆದುಕೊಂಡಿದ್ದಾರೆ. 

 

 

ಇದನ್ನೂ ಓದಿ: ಮರುಕಳಿಸಿದ ಇತಿಹಾಸ, ಆದರೆ ಅಂದು ಕಾಂಗ್ರೆಸ್, ಇಂದು ಬಿಜೆಪಿ!  

ದೆಹಲಿಯ 7 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್‌ ಗೆಲವು ಸಾಧಿಸಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಶೀಲಾ ದೀಕ್ಷಿತ್ ಕೂಡ ಮುಗ್ಗರಿಸಿದ್ದಾರೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!