ನವದೆಹಲಿ(ಮೇ.23): ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಮೊದಲ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಜನಾದೇಶವನ್ನು ಗೌರವಿಸುವುದಾಗಿ ಘೋಷಿಸಿದ್ದಾರೆ.

ಭಾರತದ ಮತದಾರ ಲೋಕಸಭೆ ಚುನಾವಣೆಗೆ ತನ್ನ ತೀರ್ಪನ್ನು ನೀಡಿದ್ದು, ಕಾಂಗ್ರೆಸ್ ಮೊದಲಿಗೆ ಈ ಜನಾದೇಶವನ್ನು ಗೌರವಿಸಲಿದೆ ಎಂದು ರಾಹುಲ್ ಸ್ಪಷ್ಟಪಡಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಅಭಿನಂದಿಸಿದ ಕಾಂಗ್ರೆಸ್ ಅಧ್ಯಕ್ಷ, ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಮೋದಿ ಅವರಿಗೆ ವೈಯಕ್ತಿಕವಾಗಿ ಮತ್ತು ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಜನಾದೇಶಕ್ಕೆ ಯಾವುದೇ ಬಣ್ಣ ಕಟ್ಟುವುದಿಲ್ಲ ಎಂದ ರಾಹುಲ್, ಸೋಲಿನ ಕುರಿತು ಪರಾಮರ್ಶೆ ನಡೆಸುವುದಾಗಿ ಸ್ಪಷ್ಟಪಡಿಸಿದರು.