ಕರ್ನಾಟಕದಲ್ಲಿ 2 ಹಂತಗಳಲ್ಲಿ ಮತದಾನ; ಮೊದಲ ಹಂತದ ಮತದಾನ ಏ. 18 (ಗುರುವಾರ); 2ನೇ ಹಂತದ ಮತದಾನ ಏ. 23 (ಮಂಗಳವಾರ) | ದೇಶದ ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲೂ ಚುನಾವಣಾ ಆಯೋಗದ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ ಸಕ್ರಿಯ
ಬೆಂಗಳೂರು: 17ನೇ ಲೋಕಸಭಾ ಚುನಾವಣೆಗೆ ದಿನಾಂಕಗಳು ಘೋಷಣೆಯಾಗಿವೆ. ಸ್ವಚ್ಛ ಮತ್ತು ಪಾರದರ್ಶಕ ಚುನಾವಣೆ ನಡೆಯುವಂತಾಗಲು, ಚುನಾವಣಾ ಆಯೋಗ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ.
ಚುನಾವಣಾ ಅಕ್ರಮಗಳನ್ನು ತಡೆಯಲು ಹಾಗೂ ಮತದಾರರಿಗೆ ಬೇಕಾದ ಮಾಹಿತಿಯನ್ನು ಒದಗಿಸಲು ಟೋಲ್ ಫ್ರೀ ಸಂಖ್ಯೆಯನ್ನು ಚುನಾವಣಾ ಆಯೋಗ ಆರಂಭಿಸಿದೆ.
ಲೋಕಸಮರದ ಲೇಟೆಸ್ಟ್ ಅಪ್ಡೇಟ್ಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1950 ದೇಶದ ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲೂ ಸಕ್ರಿಯವಾಗಿದೆ. ಚುನಾವಣೆಗೆ ಬೇಕಾಗಿರುವಂತಹ ಎಲ್ಲಾ ಮಾಹಿತಿಗಳು, ಫೀಡ್ ಬ್ಯಾಕ್, ಸಲಹೆಗಳು ಮತ್ತು ದೂರುಗಳನ್ನು ಇಲ್ಲಿ ನೊಂದಾಯಿಸಬಹುದಾಗಿದೆ.
ಈ ಕರೆಯು ಉಚಿತವಾಗಿರಲಿದ್ದು ದೇಶದ ಯಾವುದೇ ಭಾಗದಿಂದಲೂ ಕರೆಯನ್ನು ಮಾಡಬಹುದಾಗಿದೆ.
17ನೇ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ದೇಶದಲ್ಲಿ ಏ.11 ರಿಂದ ಆರಂಭವಾಗಿ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏ. 18 (ಗುರುವಾರ), ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಏ. 23 (ಮಂಗಳವಾರ) ಮತದಾನ ನಡೆಯಲಿದೆ.