ಶಾಮನೂರು ಕುಟುಂಬಕ್ಕೆ ಟಿಕೆಟ್ ಬೇಕಿಲ್ಲ, ದಾವಣಗೆರೆಯಿಂದ ಅಚ್ಚರಿ ‘ ಕೈ’ ಅಭ್ಯರ್ಥಿ!

By Web Desk  |  First Published Mar 11, 2019, 5:57 PM IST

ಒಂದು ಕಡೆ ಮಂಡ್ಯ ಮತ್ತು ಮೈಸೂರು ಲೋಕ ಕ್ಷೇತ್ರಗಳು ಕಾಂಗ್ರೆಸ್ಸಿಗೆ ತಲೆನೋವಾಗಿದ್ದರೆ ಅದಕ್ಕೆ ಇದೀಗ ಹೊಸ ಸೇರ್ಪಡೆ ದಾವಣಗೆರೆ. 


ದಾವಣಗೆರೆ[ಮಾ. 11]  ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ  ಹೈಕಮಾಂಡ್ ಕಸರತ್ತು ನಡೆಸಿದೆ. ಶಾಮನೂರು ಶಿವಶಂಕರಪ್ಪ ಅವರ ಮಗ ಎಸ್. ಎಸ್.ಮಲ್ಲಿಕಾರ್ಜುನ್ ನಡೆ ಕಾಂಗ್ರೆಸ್ ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸಿದೆ.

ಹೈಕಮಾಂಡ್ ಟಿಕೆಟ್ ನೀಡಿದ್ರು  ಮಲ್ಲಿಕಾರ್ಜುನ್ ಸ್ಪರ್ಧೆ ಮಾಡಲು ಒಪ್ಪಿಲ್ಲ. ಹಾಗಾಗಿ ಮತ್ತೊಬ್ಬ ಸೂಕ್ತ ಅಭ್ಯರ್ಥಿ ಹುಡುಕಾಟ ಕಾಂಗ್ರೆಸ್ ಗೆ ಸವಾಲಾಗಿದೆ. ಹಿರಿಯ ನಾಯಕ ಶಾಮನೂರು ತಮ್ಮ ನಿಗೂಢ ನಡೆಯನ್ನು ಬಿಟ್ಟುಕೊಟ್ಟಿಲ್ಲ.

Tap to resize

Latest Videos

ಊಟಕ್ಕೆ ಕರೆದು ಎಂಬಿಪಾ ಜಾಡಿಸಿದ ಶಾಮನೂರು ಪುತ್ರ!

ಒಮ್ಮೆ ನಾನೇ ಅಭ್ಯರ್ಥಿ ಎಂದು ಹೇಳುವ ಶಾಮನೂರು ಇನ್ನೊಮ್ಮೆ ವಯಸ್ಸಿನ ಕಾರಣಕ್ಕೆ ಹೈ ಕಮಾಂಡ್ ಒಪ್ಪುವುದಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ದಾವಣಗೆರೆ ಅಭ್ಯರ್ಥಿ ಫೈನಲ್ ಆಗಲಿದ್ದು  ಶಾಮನೂರು ಕುಟುಂಬ ನಿರಾಕರಿಸಿದ್ರೆ ಹೆಚ್.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

click me!