ಸುಮ​ಲತಾ ಗೆಲುವು ನಿಶ್ಚಿತ : ಭವಿಷ್ಯ ನುಡಿದ ಬಿಜೆಪಿ ನಾಯಕ

By Web DeskFirst Published Apr 5, 2019, 11:26 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇತ್ತ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಸುಮಲತಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇನ್ನೊಂದು ಕಡೆ ಬಿಜೆಪಿ ನಾಯಕರು ಅವರು ಗೆದ್ದೆ ಗೆಲ್ತಾರೆ ಎಂದು ಭವಿಷ್ಯವನ್ನು ನುಡಿದಿದ್ದಾರೆ. 

ದಾವಣಗೆರೆ: ಮಂಡ್ಯ​ದಲ್ಲಿ ಪಕ್ಷೇ​ತರ ಅಭ್ಯರ್ಥಿ ಸುಮ​ಲತಾ ಗೆಲುವು, ತುಮ​ಕೂ​ರಿ​ನಲ್ಲಿ ಮಾಜಿ ಪ್ರಧಾನಿ ಎಚ್‌.​ಡಿ.​ದೇ​ವೇ​ಗೌ​ಡರ ಸೋಲು ನಿಶ್ಚಿತ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾ​ಧ್ಯಕ್ಷ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಭವಿಷ್ಯ ನುಡಿ​ದಿ​ದ್ದಾರೆ.

ನಗ​ರ​ದಲ್ಲಿ ಗುರು​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ತುಮ​ಕೂ​ರಿ​ನಲ್ಲಿ ದೇವೇ​ಗೌ​ಡರು, ಮಂಡ್ಯ ಹಾಗೂ ಹಾಸ​ನ​ದಲ್ಲಿ ದೇವೇ​ಗೌ​ಡರ ಮಕ್ಕ​ಳು, ಮೊಮ್ಮ​ಕ್ಕಳು ಸೋತು ಮನೆ ಸೇರು​ತ್ತಾರೆ. ತುಮ​ಕೂ​ರಿ​ನಲ್ಲಿ ಬಿಜೆ​ಪಿಯ ಜಿ.ಎ​ಸ್‌.​ಬ​ಸ​ವ​ರಾಜ, ಹಾಸ​ನ​ದಲ್ಲಿ ಎ.ಮಂಜು ಗೆಲುವು ದಾಖ​ಲಿ​ಸ​ಲಿ​ದ್ದಾರೆ ಎಂದ​ರು.

ಇನ್ನು ಮಂಡ್ಯ​ದಲ್ಲಿ ಸುಮ​ಲತಾ ಅವ​ರಿಗೆ ಎಲ್ಲರ ಬೆಂಬ​ಲವೂ ಇದ್ದು, ಸುಮ​ಲತಾ ಅಂಬ​ರೀಷ್‌ ಭಾರೀ ಅಂತ​ರ​ದಲ್ಲೇ ಜಯ ದಾಖ​ಲಿ​ಸ​ಲಿದ್ದಾರೆ. ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರ​ದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.​ಸಿ​ದ್ದೇ​ಶ್ವರ ಈಗಾ​ಗಲೇ ಗೆದ್ದಾ​ಗಿದೆ. ಎಷ್ಟುಮತ​ಗಳ ಅಂತ​ರ ಎಂಬು​ದಷ್ಟೇ ಲೆಕ್ಕ ಮಾಡ​ಬೇ​ಕಷ್ಟೇ ಎಂದು ತಿಳಿ​ಸಿ​ದರು.

ರಾಜ್ಯ​ದಲ್ಲಿ 22 ಕ್ಷೇತ್ರ​ದಲ್ಲಿ ಬಿಜೆಪಿ ಜಯ ಸಾಧಿ​ಸು​ವುದು ನಿಶ್ಚಿತ. ದೇಶ​ದಲ್ಲಿ ಬಿಜೆಪಿ ಸ್ವಂತ ಬಲ​ ಮೇಲೆಯೇ 300 ಸ್ಥಾನ ಗಳಿ​ಸ​ಲಿದ್ದು, ಮೋದಿ ಮತ್ತೊಮ್ಮೆ ಪ್ರಧಾ​ನಿ​ಯಾ​ಗ​ಲಿ​ದ್ದಾರೆ.

ವಿದೇ​ಶೀ ಹೂಡಿ​ಕೆ​ದಾ​ರರು ನಮ್ಮ ದೇಶ​ದತ್ತ ಮುಖ ಮಾಡು​ತ್ತಿದ್ದು, 16 ಲಕ್ಷ ಕೋಟಿ ಹೂಡಿಕೆ ಪ್ರಮಾಣ ಹೆಚ್ಚಾ​ಗಿದೆ. ದೇಶದ ಆರ್ಥಿಕ ಸ್ಥಿತಿಯಲ್ಲೂ ಕ್ರಾಂತಿ​ಕಾರಿ ಬದ​ಲಾ​ವಣೆ ಮೋದಿ ಆಡಳಿತದಲ್ಲಿ ಆಗಿದೆ. ಮುಂದೆಯೂ ಆಗ​ಲಿದೆ ಎಂದು ಹೇಳಿ​ದರು.

ಬಿಜೆಪಿ ಮುಖಂಡ, ಮಾಜಿ ಸಚಿವ ಮುರು​ಗೇಶ ನಿರಾಣಿ ಮಾತ​ನಾಡಿ, ಬೆಳ​ಗಾವಿ ಭಾಗದ ಎಲ್ಲಾ 7 ಲೋಕ​ಸಭಾ ಕ್ಷೇತ್ರ​ಗ​ಳಲ್ಲೂ ಬಿಜೆ​ಪಿ ಗೆಲು​ವು ಸಾಧಿ​ಸ​ಲಿದೆ. ದಾವ​ಣ​ಗೆ​ರೆ​ಯಲ್ಲೂ ನಮ್ಮ ಅಭ್ಯರ್ಥಿ ಜಿ.ಎಂ.​ಸಿ​ದ್ದೇ​ಶ್ವರ ಸತತ 4ನೇ ಬಾರಿಗೆ ಜಯ ದಾಖ​ಲಿ​ಸ​ಲಿ​ದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!