ಎಸ್‌ಪಿ, ಬಿಎಸ್ಪಿ ಧ್ವಜವೇ ವಿಲೀನ!: ದೇಶದ ರಾಜಕೀಯ ಇತಿಹಾಸದಲ್ಲೇ ಹೊಸ ಅಚ್ಚರಿ

By Web DeskFirst Published Mar 15, 2019, 8:22 AM IST
Highlights

ಎಸ್‌ಪಿ, ಬಿಎಸ್ಪಿ ಧ್ವಜವೇ ವಿಲೀನ!| ದೇಶದ ರಾಜಕೀಯ ಇತಿಹಾಸದಲ್ಲೇ ಹೊಸ ಅಚ್ಚರಿ| ಜಂಟಿ ಚುನಾವಣಾ ಯಾತ್ರೆ, ಕಚೇರಿ ಹಂಚಿಕೆ ನಿರ್ಧಾರ

ಲಖನೌ[ಮಾ.15]: ಕೇವಲ ವರ್ಷದ ಹಿಂದೆ ಬದ್ಧ ವೈರಿಗಳಾಗಿದ್ದು, ಉಪಚುನಾವಣೆಯಲ್ಲಿ ಮೈತ್ರಿಯ ಮೂಲಕ ಗೆಲುವಿನ ಭರ್ಜರಿ ರುಚಿ ಕಂಡಿದ್ದ ಉತ್ತರಪ್ರದೇಶದ ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳು ಇದೀಗ ತಮ್ಮ ಧ್ವಜವನ್ನೇ ಪರಸ್ಪರ ವಿಲೀನಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿವೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪಣತೊಟ್ಟು ಮೈತ್ರಿಮಾಡಿಕೊಂಡಿರುವ ಈ ಎರಡೂ ಪಕ್ಷಗಳು, ಇದೀಗ ಲೋಕಸಭಾ ಚುನಾವಣೆಗಾಗಿ ತಮ್ಮ ಪಕ್ಷಗಳ ಧ್ವಜವನ್ನೇ ವಿಲೀನ ಮಾಡಿದ್ದಾರೆ. ಕೆಂಪು ಮತ್ತು ನೀಲಿ ಬಣ್ಣದ ಧ್ವಜದ ಮೇಲೆ ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷದ ಚಿಹ್ನೆಯ ಜೊತೆ ಅಖಿಲೇಶ್‌ ಯಾದವ್‌ ಹಾಗೂ ಮಾಯಾವತಿ ಅವರ ಭಾವಚಿತ್ರವನ್ನು ಕಾಣಬಹುದಾಗಿದೆ. ಈ ಧ್ವಜ ಇದೀಗ ಉತ್ತರ ಪ್ರದೇಶದಲ್ಲಿ ಭಾರೀ ಜನಪ್ರಿಯವಾಗಿದೆ. ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷಗಳು ಜಂಟಿ ಧ್ವಜವನ್ನು ಅಧಿಕೃತವಾಗಿ ಬಿಡುಗಡೆ ಮಾಡದೇ ಇದ್ದರೂ ಕಾರ್ಯಕರ್ತರ ವಲಯದಲ್ಲಿ ಈ ಧ್ವಜಕ್ಕೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಲಖನೌದಲ್ಲಿ 2,000ಕ್ಕೂ ಹೆಚ್ಚು ಜಂಟಿ ಧ್ವಜಗಳು ಮಾರಾಟವಾಗಿವೆ.

ಇದೇ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಚುನಾವಣಾ ಕಾರ್ಯಕ್ಕೆ ಕಚೇರಿಗಳನ್ನು ಹಂಚಿಕೊಳ್ಳಲು ಬಿಎಸ್‌ಪಿ ಹಾಗೂ ಎಸ್‌ಪಿ ಮುಂದಾಗಿವೆ. ಜಂಟಿಯಾಗಿ ಚುನಾವಣಾ ರಾರ‍ಯಲಿಗಳನ್ನು ಆಯೋಜಿಸುವ ಅಭೂತಪೂರ್ವ ನಡೆಯನ್ನು ಎರಡೂ ಪಕ್ಷಗಳು ಪ್ರದರ್ಶಿಸಿವೆ. ಅಲ್ಲದೇ ಚುನಾವಣಾ ಪ್ರಚಾರಕ್ಕೂ ಬಿಎಸ್‌ಬಿ ಹಾಗೂ ಸಮಾಜವಾದಿ ಪಕ್ಷಗಳು ಒಂದೇ ವಾಹನವನ್ನು ಬಳಕೆ ಮಾಡಿಕೊಳ್ಳುತ್ತಿವೆ.

click me!