ಲೋಕಸಭಾ ಚುನಾವಣೆ : ನಿಖಿಲ್ ಸ್ಪರ್ಧೆಗೆ ಮೂರು ಕಾರಣಗಳು

By Web DeskFirst Published Mar 15, 2019, 7:42 AM IST
Highlights

ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ವೇಳೆ ನಿಖಿಲ್ ಸ್ಪರ್ಧೆ ಮಾಡುತ್ತಿರುವುದು ಏಕೆ ಎಂಬ ಬಗ್ಗೆ ಮೂರು ಪ್ರಬಲ ಕಾರಣಗಳನ್ನು ಸಿಎಂ ಕುಮಾರಸ್ವಾಮಿ ನೀಡಿದ್ದಾರೆ. 

ಮಂಡ್ಯ : ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ವೇಳೆ ನಿಖಿಲ್ ಸ್ಪರ್ಧೆ ಮಾಡುತ್ತಿರುವುದು ಏಕೆ ಎಂಬ ಬಗ್ಗೆ ಮೂರು ಪ್ರಬಲ ಕಾರಣಗಳನ್ನು ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ನೀಡಿದ್ದಾರೆ. ಅವುಗಳು ಇಂತಿವೆ.

1 ನನ್ನ ಮಗನನ್ನು ಅಧಿಕಾರಕ್ಕೆ ಕರೆತರುತ್ತಿರುವುದು ಎಂಪಿಯಾಗಿ ಮೆರೆಸೋಕೆ ಅಲ್ಲ. ನೋವಿನಲ್ಲಿ ರುವ ಮಂಡ್ಯ ಜಿಲ್ಲೆಯ ಜನರ ಕಣ್ಣೀರು ಒರೆಸೋಕೆ.

2 ನನಗೆ ಹೃದಯ ಶಸ್ತ್ರಚಿಕಿತ್ಸೆಯಾಗಿ ಅನಾರೋಗ್ಯವಾಗಿದ್ದ ವೇಳೆ ರಾಜಕೀಯವಾಗಿ ನಿಮಗೆ ಬೆಂಬಲವಾಗಿ ನಿಲ್ಲುವೆ, ನಾನು ಹಲವು ಕ್ಷೇತ್ರ ಗಳಿಗೆ ನಿಮ್ಮ ಪರವಾಗಿ ಹೋಗುತ್ತೇನೆ’ ಎಂದ. ಅವನು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡು ನನಗೆ ಬೆಂಬಲವಾಗಿ ನಿಲ್ಲಲು ರಾಜಕೀಯಕ್ಕೆ ಬಂದಿದ್ದಾನೆ.

3 ನಿಖಿಲ್, ಪ್ರಜ್ವರ್‌ರನ್ನು ಕುಟುಂಬ ವ್ಯಾಮೋಹ ದಿಂದ ರಾಜಕಾರಣಕ್ಕೆ ಕರೆತರುತ್ತಿಲ್ಲ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಸಲುವಾಗಿ ಕರೆತರುತ್ತಿದ್ದೇವೆ. ಮಂಡ್ಯದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ, ತಮ್ಮದು ಕುಟುಂಬ ರಾಜಕಾರಣ ಎಂಬ ಟೀಕೆಗಳಿಗೆ ತಿರುಗೇಟು ನೀಡಿದರು. 

1 ಕಣ್ಣೀರು ಒರೆಸಲು ಕುಮಾರಸ್ವಾಮಿಯ 2 ಬೆಂಬಲವಾಗಿ ನಿಲ್ಲಲು ಜೆಡಿಎಸ್ ಪಕ್ಷವನ್ನು ಮುಂದೆ ಬೆಳೆಸಲು

click me!