ಸ್ಟಾರ್‌ ಪ್ರಚಾರಕ ಎಂದರೆ ಹಣೆ ಮೇಲೆ ಸ್ಟಾರ್‌ ಹಾಕಿಕೊಳ್ಬೇಕಾ?

By Web DeskFirst Published Mar 30, 2019, 8:47 AM IST
Highlights

‘ನೀವು ಸಹ ಸ್ಟಾರ್‌ ಪ್ರಚಾರಕರಾ?’| ಸ್ಟಾರ್‌ ಪ್ರಚಾರಕ ಎಂದರೆ ಹಣೆ ಮೇಲೆ ಸ್ಟಾರ್‌ ಹಾಕಿಕೊಳ್ಬೇಕಾ?| ನಾನು ಸಹ ಸ್ಟಾರ್‌ ಪ್ರಚಾರಕ

ಮೈಸೂರು[ಮಾ.30]: ನಾನೂ ಸ್ಟಾರ್‌ ಪ್ರಚಾರಕ. ಸ್ಟಾರ್‌ ಎಂದರೆ ನಾನು ಹಣೆ ಮೇಲೆ ಸ್ಟಾರ್‌ ಹಾಕಿಕೊಳ್ಳಬೇಕಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ‘ನೀವು ಸಹ ಸ್ಟಾರ್‌ ಪ್ರಚಾರಕರಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಹ ಸ್ಟಾರ್‌ ಪ್ರಚಾರಕ. 28 ಕ್ಷೇತ್ರಗಳಲ್ಲಿ ನಾನು ಪ್ರವಾಸ ಮಾಡುತ್ತೇನೆ. ಜೆಡಿಎಸ್‌- ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.

ಐಟಿ ರೇಡ್‌ಗೆ ನಮ್ಮ ವಿರೋಧ ಇಲ್ಲ. ಆದರೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಏಕೆ ಐಟಿ ದಾಳಿ ನಡೆಸಿದ್ದಾರೆ? ಐಟಿ ದಾಳಿಯು ದೈನಂದಿನ ಕಾರ್ಯವಾಗಿದ್ದರೆ ಬಿಜೆಪಿಯವರ ಬಳಿ ದುಡ್ಡಿಲ್ಲವಾ? ಯಡಿಯೂರಪ್ಪ ಶಾಸಕರಿಗೆ .25 ಕೋಟಿ ಆಫರ್‌ ಇಟ್ಟಿರಲಿಲ್ವಾ? ಕೆ.ಎಸ್‌. ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಮೆಷಿನ್‌ ಸಿಕ್ಕಿರಲಿಲ್ವಾ? ಅವರ ಮನೆಗಳ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ ಎಂಬುದು ನನ್ನ ಪ್ರಶ್ನೆಯಾಗಿದೆ ಎಂದರು.

ಇಂತಹ ಐಟಿ ದಾಳಿಗಳಿಂದ ನಮಗೆ ಬೆಂಬಲಿಸುವವರು, ಸಹಾಯ ಮಾಡುವವರು ಹಿಂದೆ ಹೋಗುತ್ತಾರೆ. ಕಾರ್ಯಕರ್ತರು, ಮುಖಂಡರು ಭಯದಿಂದ ಚುನಾವಣೆ ಹಿಂದೆ ಸರಿಯುತ್ತಾರೆ. ಹೀಗಾಗಿ, ಇಂತಹ ದಾಳಿಗಳು ನಮಗೆ ಸ್ವಲ್ಪ ಪರಿಣಾಮ ಬೀರುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಪ್ರಧಾನಿ ಮೋದಿ ಅವರು ಇದನ್ನು ಪಾಲಿಸಬೇಕು ಎಂದು ತಿಳಿಸಿದರು.

ಪಾಪ ಸೋತುಬಿಟ್ಟರು:

ಇಂಟರ್ವಲ್‌ ಬಿಟ್ವಿನ್‌ ಪಾಲಿಟಿಕ್ಸ್‌ ಇರಬೇಕು. ಗುರುವಾರ ಐಪಿಎಲ್‌ ಮ್ಯಾಚ್‌ ನೋಡಲು ಹೋಗಿದ್ದೆ. ಪಾಪ ಸೋತುಬಿಟ್ಟರು. ರಾಜಕೀಯದ ಮಧ್ಯೆ ಇವೆಲ್ಲ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

click me!