ಕೆಪಿಸಿಸಿ ಪಟ್ಟಿಗೂ ಮುನ್ನವೇ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ!?

Published : Mar 12, 2019, 05:28 PM ISTUpdated : Mar 12, 2019, 05:32 PM IST
ಕೆಪಿಸಿಸಿ ಪಟ್ಟಿಗೂ ಮುನ್ನವೇ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ!?

ಸಾರಾಂಶ

ಮಂಡ್ಯ, ಮೈಸೂರು ಲೋಕ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವಾಗಲೆ ಇನ್ನೊಂದು ಕ್ಷೇತ್ರ ಸಹ ಕಾಂಗ್ರೆಸ್ ತಲೆಬಿಸಿಯನ್ನು ಇನ್ನಷ್ಟು ಹೆಚ್ಚು ಮಾಡಿದರೆ ಅಚ್ಚರಿ ಇಲ್ಲ.

ಕೊಪ್ಪಳ[ಮಾ. 12]  ಕೊಪ್ಪಳ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವರಾಜ ತಂಗಡಗಿ ಆಯ್ಕೆಯಾಗಿದ್ದಾರೆ! ಕಾಂಗ್ರೆಸ್ ಇಲ್ಲಿಯವರೆಗೆ ಯಾವುದೆ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಹೊರ ಹಾಕದೆ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ತಂಗಡಗಿ ಅಭಿಮಾನಿಗಳು ಅಭ್ಯರ್ಥಿಯ ಅಧಿಕೃತ ಘೋಷಣೆ ಮಾಡಿದ್ದಾರೆ!

ಸಿದ್ದಾಪುರ ಜಿಲ್ಲಾ ಕಾಂಗ್ರೆಸ್ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ಅಭಿಮಾನಿಗಳು ತಂಗಡಗಿಗೆ ಜೈ ಎಂದಿದ್ದಾರೆ. ಈ ಪೋಸ್ಟ್ ಸಹಜವಾಗಿಯೇ ಜಿಲ್ಲಾ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ.

ಮಂಡ್ಯ ಕಣದಿಂದ ಸುಮಲತಾ ಹಿಂದೆ ಸರಿತಾರೆ! ಎಲ್ಲಿಂದ ಬಂದ ಸುದ್ದಿ

ಇನ್ನೊಂದು ಕಡೆ ಕಾಂಗ್ರೆಸ್ ಟಿಕೆಟ್ ಗಾಗಿ ಅಪ್ಪ-ಮಗನ ನಡುವೆ ಪೈಪೋಟಿ ಏರ್ಪಟ್ಟಿದೆ.  ಮಾಜಿ ಶಾಸಕ ಬಸವರಾಜ ಹಿಟ್ನಾಳ್- ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್ ನಡುವೆ ಟಿಕೆಟ್ ಗಾಗಿ ಪೈಪೋಟಿ ನಡೆದಿದೆ. ಇದರ ಮದ್ಯೆಯೇ ಶಿವರಾಜ ತಂಗಡಗಿ ಬೆಂಬಲಿಗರು ಜೈಕಾರ ಹಾಕಿದ್ದಾರೆ. 


 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!