‘ಬಿಜೆಪಿಗೆ ಮತ ಹಾಕಬೇಕೆಂದಿದ್ದ ನನ್ನಿಂದ ಕೈಗೆ ಮತ ಹಾಕಿಸಿದರು’

Published : May 06, 2019, 01:24 PM ISTUpdated : May 06, 2019, 01:28 PM IST
‘ಬಿಜೆಪಿಗೆ ಮತ ಹಾಕಬೇಕೆಂದಿದ್ದ ನನ್ನಿಂದ ಕೈಗೆ ಮತ ಹಾಕಿಸಿದರು’

ಸಾರಾಂಶ

ನಾನು ಬಿಜೆಪಿ ಮತ ಚಲಾಯಿಸಿಬೇಕೆಂದಿದ್ದೆ, ಆದರೆ ನನ್ನನ್ನು ಒತ್ತಾಯಿಸಿ ಕೈ ಗೆ ಮತ ಹಾಕುವಂತೆ ಮಾಡಿದರು ಎಂದು ಮಹಿಳೆಯೋರ್ವರು ಆರೋಪ ಮಾಡಿದ್ದಾರೆ. ಹಾಗಾದ್ರೆ ಈ ಘಟನೆ ನಡೆದಿದ್ದೆಲ್ಲಿ

ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ಹೆಚ್ಚಿದೆ. ಇಂದು ಸೋಮವಾರ ದೇಶದಲ್ಲಿ 5ನೇ ಹಂತದ ಚುನಾವಣೆ ನಡೆಯುತ್ತಿದ್ದು, ಸ್ಮೃತಿ ಇರಾನಿ, ರಾಹುಲ್ ಕ್ಷೇತ್ರವಾದ ಅಮೇಥಿಯಲ್ಲಿಯೂ ಚುನಾವಣೆ ನಡೆಯುತ್ತಿದೆ. 

ಇದೇ ವೇಳೆ ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಹಾಕುವಂತೆ ಒತ್ತಾಯಿಸಿದ ಬಗ್ಗೆ ಮಹಿಳೆಯೋರ್ವರು ಹೇಳಿದ ವಿಡಿಯೋ ವೈರಲ್ ಆಗಿದೆ. 

ಅಮೇಥಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಕಾಂಗ್ರೆಸ್ ನವರು ಮತ ಹಾಕಲು ಒತ್ತಾಯಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ. 

ನನ್ನ ಕೈ ಹಿಡಿದು ಕೈ ಗುರುತಿನ ಗುಂಡಿ ಒತ್ತುವಂತೆ ಒತ್ತಾಯಿಸಿದರು. ಆದರೆ ನಾನು ಬಿಜೆಪಿಗೆ ಮತ ಹಾಕಬೇಕೆಂದುಕೊಂಡಿದ್ದೆ ಎಂದು ಪದೇ ಪದೇ ಹೇಳಿದ್ದಾರೆ. 

 

 ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೇ ಇಂತಹ ಕೃತ್ಯಕ್ಕೆ ಸಾತ್ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ಚುನಾವಣಾ ಆಯೋಗ ಕ್ರಮ ಕೈಗೊಳ್ಳುವ ಭರವಸೆ ಇದೆ. ರಾಹುಲ್ ಗಾಂಧಿ ಎಂತಹ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದು ದೇಶದ ಜನತೆಗೆ ತಿಳಿಯಬೇಕು ಎಂದಿದ್ದಾರೆ. 

ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಅಮೇಥಿಯಲ್ಲಿ ಚುನಾವಣೆ ನಡೆಯುತ್ತಿದ್ದು, ಕಳೆದ ವರ್ಷ ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಸೋಲು ಕಂಡಿದ್ದರು. ಈ ಬಾರಿ ಮತ್ತೆ ಇಬ್ಬರೂ ಎದುರಾಳಿಗಳಾಗಿ ಕಣಕ್ಕೆ ಇಳಿದಿದ್ದಾರೆ.

ಮಂಡ್ಯದಲ್ಲಿ ಸುಮಲತಾಗೆ 80 ಸಾವಿರ ಅಂತರದಲ್ಲಿ ಗೆಲುವು : ಸಮೀಕ್ಷೆ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!