ಪ.ಬಂಗಾಳದಲ್ಲಿ ಮೋದಿ-ದೀದಿ ನೆಕ್ ಟು ನೆಕ್ ಫೈಟ್!

By Web DeskFirst Published May 23, 2019, 11:46 AM IST
Highlights

ಪ.ಬಂಗಾಳದಲ್ಲಿ ಬದಲಾಯ್ತು ಸಂಪೂರ್ಣ ಚಿತ್ರಣ| ಬಿಜೆಪಿ-ಟಿಎಂಸಿ ನಡುವೆ ಬಿರುಸಿನ ಹಣಾಹಣಿ| ಪ.ಬಂಗಾಳದಲ್ಲಿ ಒಟ್ಟು 42 ಲೋಕಸಭಾ ಕ್ಷೇತ್ರಗಳು| 22ರಲ್ಲಿ ಟಿಎಂಸಿ ಮುನ್ನಡೆ, 18ರಲ್ಲಿ ಬಿಜೆಪಿ ಮುನ್ನಡೆ| ಬಿಜೆಪಿಯತ್ತ ವಾಲಿದ ಎಡ ಪಕ್ಷಗಳ ಮತದಾರರು|

ಕೋಲ್ಕತ್ತಾ(ಮೇ.23): ಇಡೀ ರಾಜ್ಯಕ್ಕೆ ನಾನೇ ರಾಣಿ ಎಂದು ಬೀಗುತ್ತಿದ್ದ ಟಿಎಂಸಿ ಅಧಿಕಾನಯಕಿ, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಮೋದಿ-ಶಾ ಜೋಡಿ ಭರ್ಜರಿ ಶಾಕ್ ನೀಡಿದೆ.

ಪ.ಬಂಗಾಳದಲ್ಲಿ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ ಮತ್ತು ಟಿಎಂಸಿ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪ.ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 18 ಕ್ಷೇತ್ರಗಳಲ್ಲಿ ನುನ್ನಡೆ ದಾಖಲಿಸಿದೆ.

ಕಳೆದ(2014)ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಲೋಕಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದ ಬಿಜೆಪಿ, ಈ ಬಾರಿ ಅಧಿಕ ಸಂಖ್ಯೆಯ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗದುಕೊಳ್ಳುವುದು ಬಹುತೇಕ ನಿಚ್ಚಳವಾಗಿದೆ.

ಎಡಪಕ್ಷಗಳ ಮತದಾರರು ಈ ಬಾರಿ ಸಂಪೂರ್ಣವಾಗಿ ಬಿಜೆಪಿಯತ್ತ ವಾಲಿರುವುದು ಪಕ್ಷದ ಉತ್ತಮ ಪ್ರದರ್ಶನಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

click me!