
ಬೆಂಗಳೂರು(ಮೇ.19): ಲೋಕಸಭೆ ಚುನಾವಣೆಗೆ ಇಂದು ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯ ಕಂಡಿದೆ. ಇದೀಗ ದೇಶದ ಚಿತ್ತ ಮೇ.23ರ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ದೇಶದ ಪ್ರಮುಖ ವಿವಿಧ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಹೊರಗಡೆವಿದ್ದು, ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಅಂಶ ಇಲ್ಲಿದೆ.
ಚುನಾವಣೋತ್ತರ ಸಮೀಕ್ಷೆ: ರಿಪಬ್ಲಿಕ್ ಜನ್ ಕಿ ಬಾತ್ ಏನು ಹೇಳುತ್ತೆ?
ಎನ್ ಡಿಟಿವಿ ಸಮೀಕ್ಷೆ
NDTV ಚುನಾವಣೋತ್ತರ ಸಮೀಕ್ಷೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದೆ. ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿ ಕೂಟಕ್ಕೆ 300 ಸೀಟುಗಳು ದೊರೆಯಲಿವೆ. ಅದರಂತೆ ಕಾಂಗ್ರೆಸ್ ನೇತೃತ್ವದ ಯುಪಿಎಗೆ 127 ಸೀಟುಗಳು ದೊರೆಯಲಿವೆ ಎನ್ನಲಾಗಿದೆ. ಇತರರಿಗೆ 127 ಸ್ಥಾನ ದೊರೆಯಲಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.