ಚುನಾವಣೋತ್ತರ ಸಮೀಕ್ಷೆ: ರಿಪಬ್ಲಿಕ್ ಜನ್ ಕಿ ಬಾತ್ ಏನು ಹೇಳುತ್ತೆ?

By Web DeskFirst Published May 19, 2019, 6:49 PM IST
Highlights

ಮಹಾಭಾರತ ಮಹಾಸಂಗ್ರಾಮದ ಮಹಾ EXIT POL| ಮತದಾನೋತ್ತರ ಸಮೀಕ್ಷೆಯಲ್ಲಿ ದೇಶದ ಭವಿಷ್ಯದ ಅಂದಾಜು ಚಿತ್ರಣ| ಹೊರಬಿದ್ದ ‘ರಿಪಬ್ಲಿಕ್​ ಟಿವಿ- ಜನ್​ ಕಿ ಬಾತ್​’ ಸಮೀಕ್ಷೆ| ಪ್ರಕಾರ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ| ಎನ್​ಡಿಎ ಮೈತ್ರಿ ಕೂಟಕ್ಕೆ 295 ರಿಂದ 315 ಸೀಟುಗಳು| ಕಾಂಗ್ರೆಸ್ ನೇತೃತ್ವದ ಮಹಾಘಟ್​ಬಂಧನ್​ಗೆ 122ರಿಂದ 125 ಸೀಟುಗಳು| ಪಕ್ಷೇತರರಿಗೆ 102ರಿಂದ 125 ಸ್ಥಾನಗಳು ದೊರೆಯಲಿವೆ|

ಬೆಂಗಳೂರು(ಮೇ.19): ಲೋಕಸಭೆ ಚುನಾವಣೆಗೆ ಇಂದು ಏಳನೇಯ ಮತ್ತು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯ ಕಂಡಿದೆ. ಇದೀಗ ದೇಶದ ಚಿತ್ತ ಮೇ.23ರ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ದೇಶದ ಪ್ರಮುಖ ವಿವಿಧ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಹೊರಗಡೆವಿದ್ದು, ವಿವಿಧ ಚುನಾವಣೋತ್ತರ ಸಮೀಕ್ಷೆಗಳ ಅಂಕಿ ಅಂಶ ಇಲ್ಲಿದೆ.

| The Jan Ki Baat exit poll numbers are in - projections show 305 seats for NDA and 124 seats for UPA. Tune in to watch LIVE here - https://t.co/LGCyJUWcLF pic.twitter.com/sFICJqsthl

— Republic (@republic)

‘ರಿಪಬ್ಲಿಕ್​ ಟಿವಿ- ಜನ್​ ಕಿ ಬಾತ್​’ ಸಮೀಕ್ಷೆ:
‘ರಿಪಬ್ಲಿಕ್​ ಟಿವಿ- ಜನ್​ ಕಿ ಬಾತ್​’ ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಕೂಟಕ್ಕೆ 295 ರಿಂದ 315 ಸೀಟುಗಳು ದೊರೆಯಲಿವೆ ಎಂದು ‘ರಿಪಬ್ಲಿಕ್​ ಟಿವಿ- ಜನ್​ ಕಿ ಬಾತ್​’ ಸಮೀಕ್ಷೆ ತಿಳಿಸಿದೆ.

ಅದರಂತೆ ಕಾಂಗ್ರೆಸ್ ನೇತೃತ್ವದ ಮಹಾಘಟ್​ಬಂಧನ್​ಗೆ 122ರಿಂದ 125 ಸೀಟುಗಳು ದೊರೆಯಲಿವೆ ಎನ್ನಲಾಗಿದೆ. ಇದೇ ವೇಳೆ ಪಕ್ಷೇತರರಿಗೆ 102ರಿಂದ 125 ಸ್ಥಾನಗಳು ಲಭ್ಯವಾಗಲಿವೆ ಎನ್ನಲಾಗಿದೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!