ತುಮಕೂರು ಮತ್ತೆ ‘ಕೈ’ ಸೇರುತ್ತಾ? ಖರ್ಗೆ ಹೇಳಿದ ಗೂಢಾರ್ಥ

Published : Mar 18, 2019, 07:53 PM ISTUpdated : Mar 18, 2019, 08:01 PM IST
ತುಮಕೂರು ಮತ್ತೆ ‘ಕೈ’ ಸೇರುತ್ತಾ? ಖರ್ಗೆ ಹೇಳಿದ ಗೂಢಾರ್ಥ

ಸಾರಾಂಶ

ಲೋಕ ಸಮರಕ್ಕೆ ಸಜ್ಜಾಗಿರುವ ದೋಸ್ತಿಗಳು ಕ್ಷೇತ್ರ ಹಂಚಿಕೆ ಮಾಡಿಕೊಂಡಿವೆ. ಆದರೆ ಕೆಲವು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಕ್ಕೆ ಕಾಂಗ್ರೆಸ್ ಒಳಗಡೆಯೆ ಅಸಮಾಧಾನ ಇದೆ. 

ಕಲಬುರಗಿ[ಮಾ. 18]   ಮೈತ್ರಿ ಪಕ್ಷಗಳ ಟಿಕೆಟ್ ಹಂಚಿಕೆಯಿಂದ ಕೈ ನಾಯಕರು ಅಸಮಾಧಾನಗೊಂಡಿರುವ ಬಗ್ಗೆ  ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ.

ಕಲಬುರಗಿ ಏರ್ ಪೋರ್ಟ್ ನಲ್ಲಿ ಮಾತನಾಡಿ, ಪ್ರಸೆಂಟ್ ಎಂಪಿ ಇರುವ ಕ್ಷೇತ್ರಗಳನ್ನ ಬಿಟ್ಟು ಕೊಡುವಂತೆ ನಮ್ಮ ವಾದವಿದೆ.  ಇನ್ನೂ ಪ್ರಯತ್ನ ಮಾಡುತ್ತಿದ್ದೇವೆ,. ದೇವೇಗೌಡರ ಜೊತೆ ಮಾತನಾಡಿದ್ದೇನೆ. ದೇವೇಗೌಡರ ಮನವೊಲಿಸುವಂತ ಪ್ರಯತ್ನ ನಡೆದಿದೆ, ಸಿಎಂ ಕುಮಾರಸ್ವಾಮಿ ಅವರಿಗೂ ಕೇಳಿದ್ದೇವೆ. ಅಂತಿಮವಾಗಿ ಎಲ್ಲರೂ ಕೂಡಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. 

ಮಂಡ್ಯಕ್ಕೆ ಫಿಲ್ಮ್ ಸ್ಟಾರ್ಸ್, ಫೇಸ್ಬುಕ್‌ನಲ್ಲಿ JDS ಫುಲ್ ವಾರ್..!

ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳ ಪೈಕಿ ತುಮಕೂರಿನಲ್ಲಿ ಕಾಂಗ್ರೆಸ್ ನ ಮುದ್ದಹನುಮೇಗೌಡ ಎಂಪಿಯಾಗಿದ್ದಾರೆ. ಆದರೆ ಕ್ಷೇತ್ರವನ್ನು ಹೊಂದಾಣಿಕೆಯಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!