
ಹಾಸನ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತ ಹಾಸನದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಪ್ರಜ್ವಲ್ ರೇವಣ್ಣ ಪರವಾಗಿ ಸೂರಜ್ ರೇವಣ್ಣ ಪ್ರಚಾರಕ್ಕೆ ಇಳಿದಿದ್ದಾರೆ.
ಹಾಸನದ ಶಾಂತಿ ಗ್ರಾಮದಲ್ಲಿ ಪ್ರಚಾರಕ್ಕೆ ಇಳಿದಿರುವ ಸೂರಜ್ ರೇವಣ್ಣ ಹಾಸನದಲ್ಲಿ ಜೆಡಿಎಸ್ ಗೆ ಪೂರಕ ವಾತಾವರಣವಿದೆ. ನನ್ನ ತಮ್ಮ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರು ಈಗಾಗಲೇ ಗೆದ್ದು ಆಗಿದೆ. ಎಷ್ಟು ಮತಗಳ ಅಂತರದಿಂದ ಎನ್ನುವುದಕ್ಕಷ್ಟೇ ಕಾಯುತ್ತಿದ್ದೇವೆ ಎಂದರು.
ಹಾಸನ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ನೋಡಿ ಜನರೇ ತೀರ್ಮಾನ ಮಾಡಿದ್ದಾರೆ. ಇಲ್ಲಿ ಸೂಕ್ತ ಜವಾಬ್ದಾರಿಯಿಂದ ಕೆಲಸ ಮಾಡಲಾಗಿದೆ ಎಂದು ತಮ್ಮನ ಪರ ಪ್ರಚಾರದ ವೇಳೆ ಸೂರಜ್ ರೇವಣ್ಣ ಹೇಳಿದರು.