12 ಸೀಟು ಫೈನಲ್‌ಗೆ ಬಿಜೆಪಿ ತೀವ್ರ ಕಸರತ್ತು!

By Web DeskFirst Published Mar 13, 2019, 7:44 AM IST
Highlights

ಹಾಲಿ ಸಂಸದರಿರುವ 16 ಕ್ಷೇತ್ರಗಳಲ್ಲಿ ಸಮಸ್ಯೆಯಿಲ್ಲ| 12 ಸೀಟುಗಳೇ ಬಿಜೆಪಿಗೆ ತಲೆನೋವು

ಬೆಂಗಳೂರು[ಮಾ.13]: ರಾಜ್ಯದಲ್ಲಿ ಈ ಬಾರಿ 22 ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಬೇಕು ಎಂಬ ಉದ್ದೇಶದಿಂದ ತಂತ್ರಗಾರಿಕೆ ರೂಪಿ ಸುತ್ತಿರುವ ಬಿಜೆಪಿ ಹಾಲಿ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿ ಸಲು ಕಸರತ್ತು ನಡೆಸಿದೆ. ಕಳೆದ ಎರಡು ದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂ ರಪ್ಪ ಅವರು ಆಯಾ ಕ್ಷೇತ್ರಗಳ ಮುಖಂಡ ರೊಂದಿಗೆ ಸತತ ಸಮಾಲೋಚನೆ ನಡೆಸುತ್ತಿದ್ದು, ಪ್ರಬಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಸದ್ಯಕ್ಕೆ 16 ಮಂದಿ ಬಿಜೆಪಿ ಸಂಸದರಿದ್ದಾರೆ. ಹಾಲಿ ಸಂಸದರ ಪೈಕಿ ಬಹುತೇಕ ಅವರೆಲ್ಲರಿಗೂ ಮತ್ತೆ ಟಿಕೆಟ್ ಸಿಗುವ ಸಾಧ್ಯತೆಯೇ ಹೆಚ್ಚಾಗಿದೆ

ಹೀಗಾಗಿ, ಇನ್ನುಳಿದ 12೨ ಲೋಕಸಭಾ ಕ್ಷೇತ್ರಗಳಿಗೆ ಅರ್ಹರ ಪರಿಶೀಲನೆ ನಡೆದಿದೆ. ಈ ಪೈಕಿ ಕಲಬುರ್ಗಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ವಾಪಸ್ ಬಂದಿರುವ ಡಾ. ಉಮೇಶ್ ಜಾಧವ್ ಕಣಕ್ಕಿಳಿಯುವು ದು ಬಹುತೇಕ ಖಚಿತವಾಗಿದೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಳೆದ ಬಾರಿ ಅಲ್ಪಮತಗಳ ಅಂತರದಿಂದ ಸೋಲುಂಡಿರುವ ಬಿ.ಎನ್. ಬಚ್ಚೇಗೌಡ ಅವರಿಗೆ ಟಿಕೆಟ್ ನೀಡುವ ಸಂಭವವಿದೆ

ಇವೆರಡನ್ನೂ ಹೊರತುಪಡಿಸಿದರೆ ಮಂಡ್ಯ ಕ್ಷೇತ್ರದ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕಾಂಗ್ರೆಸ್ಸಿನ ಸುಮಲತಾ ಅಂಬರೀಷ್ ಅವರಿಗೆ ಆ ಪಕ್ಷದಿಂದ ಟಿಕೆಟ್ ನಿರಾಕರಿಸುತ್ತಿರುವುದರಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಬಲವಾಗಿದೆ. ಹಾಗಾದಲ್ಲಿ ಅವರಿಗೆ ಬಿಜೆಪಿ ಬೆಂಬಲ ನೀಡಲು ಉದ್ದೇಶಿಸಿದೆ. ಒಂದು ವೇಳೆ ಅವರು ಬಿಜೆಪಿಗೆ ಬಂದರೆ ಟಿಕೆಟ್ ನೀಡಲೂ ನಿರ್ಧರಿಸಿದೆ

ಹೀಗಾಗಿ, ಇನ್ನುಳಿದ ಒಂಬತ್ತು ಕ್ಷೇತ್ರಗಳಿಗೆ ಒಂದಕ್ಕಿಂತ ಹೆಚ್ಚು ಹೆಸರುಗಳು ಕೇಳಿಬಂದಿವೆ. ಈ ಪೈಕಿ ರಾಯಚೂರಿನಿಂದ ಮಾಜಿ ಶಾಸಕರಾದ ತಿಪ್ಪರಾಜು ಹವಾಲ್ದಾರ್ ಹಾಗೂ ಗಂಗಾಧರ್ ನಾಯಕ್ ಅವರ ಹೆಸರುಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಜೊತೆಗೆ ಹಾಲಿ ಶಾಸಕ ಶಿವನಗೌಡ ನಾಯಕ್ ಅವರು ತಮ್ಮ ಹತ್ತಿರದ ಸಂಬಂಧಿ ಅನಂತರಾಜು ಅವರಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದಾರೆ. ಆದರೆ, ತಿಪ್ಪರಾಜು ಅವರ ಹೆಸರು ಮುಂಚೂಣಿಯಲ್ಲಿದೆ.

ಅದೇ ರೀತಿ ಬಳ್ಳಾರಿ ಕ್ಷೇತ್ರದಲ್ಲಿ ಪಕ್ಷದವರಿಗೆ ಕೊಡಬೇಕೊ ಅಥವಾ ಹೊರಗಿನವರಿಗೆ ಮಣೆ ಹಾಕಬೇಕೋ ಎಂಬುದು ಅಸ್ಪಷ್ಟವಾಗಿದೆ. ದೇವೇಂದ್ರಪ್ಪ, ವೆಂಕಟೇಶ್ ಪ್ರಸಾದ್, ಮಾಜಿ ಸಂಸದೆ ಜೆ.ಶಾಂತಾ ಹಾಗೂ ಲಖನ್ ಜಾರಕಿಹೊಳಿ ಅವರ ಹೆಸರುಗಳು ಕೇಳಿಬಂದಿವೆ. ಚಿಕ್ಕೋಡಿಯಿಂದ ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಶಾಸಕ ಲಕ್ಷ್ಮಣ್ ಸವದಿ ಹಾಗೂ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರ ಹೆಸರುಗಳು ಪ್ರಸ್ತಾಪವಾಗಿದ್ದರೂ ರಮೇಶ್ ಕತ್ತಿ ಅವರ ಹೆಸರು ಅಗ್ರಸ್ಥಾನದಲ್ಲಿದೆ ಎನ್ನಲಾಗಿದೆ.

ಚಿತ್ರದುರ್ಗದಿಂದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಮಾನಪ್ಪ ವಜ್ಜಲ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಅವರು ಹೆಸರುಗಳಿವೆ. ತುಮಕೂರಿನಿಂದ ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಮಾಜಿ ಶಾಸಕ ಸುರೇಶ್‌ಗೌಡ ಅವರ ಹೆಸರುಗಳ ಪೈಕಿ ಬಸವರಾಜು ಅವರಿಗೆ ಹೆಚ್ಚಿನ ಅವಕಾಶವಿದೆ. ಕೋಲಾರದಿಂದ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಡಿ.ಎಸ್.ವೀರಯ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಹಾಗೂ ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರ ಹೆಸರುಗಳಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಂಸದ ಸಿ.ಪಿ.ಯೋಗೇಶ್ವರ್, ಕಳೆದ ಬಾರಿ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿದ್ದ ಮುನಿರಾಜುಗೌಡ ಹಾಗೂ ಜಿಲ್ಲಾಧ್ಯಕ್ಷ ರುದ್ರೇಶ್ ಅವರು ರೇಸ್‌ನಲ್ಲಿದ್ದಾರೆ. ಹಾಸನದಿಂದ ಕಾಂಗ್ರೆಸ್‌ನಲ್ಲಿರುವ ಮಾಜಿ ಸಚಿವ ಎ.ಮಂಜು, ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ ಅವರ ಹೆಸರುಗಳಿವೆ. ಚಾಮರಾಜನಗರದಿಂದ ಮಾಜಿ ಸಂಸದ ಶಿವಣ್ಣ ಹಾಗೂ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಅವರ ಹೆಸರುಗಳು ಪ್ರಸ್ತಾಪವಾಗಿವೆ.

click me!