'ನಿಮ್ಮ ಪಕ್ಷದ ಚಿಹ್ನೆ ಬದಲಾಯಿಸಿ, ಪ್ರಾಣಿ ಚಿತ್ರ ಇಟ್ಗೊಳಿ’

Published : Mar 12, 2019, 10:11 PM ISTUpdated : Mar 12, 2019, 10:15 PM IST
'ನಿಮ್ಮ ಪಕ್ಷದ ಚಿಹ್ನೆ ಬದಲಾಯಿಸಿ, ಪ್ರಾಣಿ ಚಿತ್ರ ಇಟ್ಗೊಳಿ’

ಸಾರಾಂಶ

ಬಿಜೆಪಿ ನಾಯಕ ಈಶ್ವರಪ್ಪ ಜೆಡಿಎಸ್ ಮೇಲೆ ವಾಗ್ದಾಳಿ ಮಾಡಿದ್ದಾರೆ. ರೇವಣ್ಣ ಅವರ ಮೇಲೆ ಮುಗಿಬಿದ್ದ ಈಶ್ವರಪ್ಪ ಸುಮಲತಾ ಪರ ಬ್ಯಾಟ್ ಬೀಸಿದ್ದಾರೆ.

ಮೈಸೂರು[ಮಾ .12]    ರೇವಣ್ಣ ಅವರಿಗೆ ಕ್ಷಮೆ‌ ಕೇಳುವುದಕ್ಕೆ ಬರೋದಿಲ್ವ. ಜೆಡಿಎಸ್ ನವರು ತೆನೆ ಹೊತ್ತ ಮಹಿಳೆ‌ ಚಿಹ್ನೆ ಹೊಂದಿದ್ದಾರೆ. ಆದರೆ ನೀವು ನೀಡುತ್ತಿರುವ ಹೇಳಿಕೆಗಳು ಮಹಿಳೆಯರಿಗೆ ಗೌರವ ತರುತ್ತಿಲ್ಲ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸಹೋದರಿ ಸುಮಲತಾ ಅವರ ಬಗ್ಗೆ ತುಚ್ಛ  ಹೇಳಿಕೆ ನೀಡುತ್ತಿದ್ದಾರೆ. ರೇವಣ್ಣ ಇದುವರೆಗೂ ಕ್ಷಮೆ ‌ಕೇಳಿಲ್ಲ. ಅವರ ಬದಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಸಿಎಂ‌ ಕುಮಾರಸ್ವಾಮಿ,‌ ನಿಖಿಲ್ ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ. ಎಚ್‌.ಡಿ.ದೇವೆಗೌಡರಲ್ಲಿ ನಾನು ಆಗ್ರಹ ಮಾಡುತ್ತೇನೆ ಈ ಕೂಡಲೆ ರೇವಣ್ಣರಿಂದ ಕ್ಷಮೆ ಕೇಳಿಸಿ ಎಂದರು.

‘ನಿಖಿಲ್ ಗೆ ಮತ ಕೇಳಿದ್ರೆ ಹೊಡಿತಾರೆ’ ತಪ್ಪಿಸಿಕೊಳ್ಳಲು ಉಪಾಯವೊಂದಿದೆ!

ಕ್ಷಮೆ ಕೇಳಿಸಿ, ಇಲ್ಲವಾದರೆ ನಿಮ್ಮ ಪಕ್ಷದ ಚಿಹ್ನೆಯನ್ನು ಬದಲಾಯಿಸಿ. ಯಾವುದಾದರು ಪ್ರಾಣಿಯ ಚಿಹ್ನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಈ್ಶವರಪ್ಪ ಸವಾಲು ಹಾಕಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!