ಕರ್ನಾಟಕದ ಇಬ್ಬರು ಅಭ್ಯರ್ಥಿಗಳ ಮತ ಅವರಿಗೆ ಇಲ್ಲ

By Web Desk  |  First Published Apr 24, 2019, 8:46 AM IST

ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ಮತ ಅವರಿಗೆ ಇರಲಿಲ್ಲ. ಕಾರಣವೇನು? 


ಬಳ್ಳಾರಿ: ಬಳ್ಳಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಮತ ತಮಗೇ ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ. 

ಕ್ಷೇತ್ರದ ಮಟ್ಟಿಗೆ ಇಬ್ಬರೂ ಹೊರಗಿನವರು! ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರ ಮತ ಬೆಂಗಳೂರಿನಲ್ಲಿದೆ. ಅದೇ ರೀತಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಬಳ್ಳಾರಿ ಜಿಲ್ಲೆಗೆ ಸೇರಿದವರೇ ಆಗಿದ್ದರೂ ಅವರ ಮತ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೇರಿಯಲ್ಲಿದೆ. ಹರಪನಹಳ್ಳಿ ತಾಲೂಕು ದಾವಣಗೆರೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 

Tap to resize

Latest Videos

ಉಗ್ರಪ್ಪ ಅವರಿಗೆ ಮೊದಲ ಹಂತದಲ್ಲಿ ಮತದಾನ ನಡೆದ ಬೆಂಗಳೂ ರಿನಲ್ಲಿ ಮತವಿತ್ತು. ಆದರೆ ಅವರು ಪ್ರಚಾರದ ಹಿನ್ನೆಲೆಯಲ್ಲಿ ಹೋಗಿರಲಿಲ್ಲ. ದೇವೇಂದ್ರಪ್ಪ ಅರಸಿಕೇರಿಯಲ್ಲಿ ಮತದಾನ ಮಾಡಿದರು.

click me!