ಮಂಡ್ಯ, ಹಾಸನ, ತುಮಕೂರಿನೊಂದಿಗೆ 24 ಕ್ಷೇತ್ರ ಬಿಜೆಪಿಗೆ

By Web DeskFirst Published Apr 21, 2019, 12:51 PM IST
Highlights

ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಇದೇ ವೇಳೆ ಅಭ್ಯರ್ಥಿಗಳಲ್ಲಿ ಗೆಲುವಿನ ಉತ್ಸಾಹವೂ ಹೆಚ್ಚಾಗುತ್ತಿದೆ. 2ನೇ ಹಂತಕ್ಕೆ ಪ್ರಚಾರವೂ ಬಿರುಸು ಪಡೆದುಕೊಂಡಿದೆ. 

ಶಿವಮೊಗ್ಗ :   ಲೋಕಸಭಾ ಚುನಾವಣಾ ಮಹಾ ಸಮರ ರಾಜ್ಯದಲ್ಲಿ ಆರಂಭವಾಗಿದ್ದು 2ನೇ ಹಂತದ ಚುನಾವಣೆಗೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. 

ಇದೇ ವೇಳೆ ಅಭ್ಯರ್ಥಿಗಳ ಪರ ಪ್ರಚಾರ ಬಿರುಸಿನಿಂದ ಸಾಗಿದ್ದು, ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಾಸನ ಅಭ್ಯರ್ಥಿ ಎ ಮಂಜು ಜೆಡಿಎಸ್ ಕಾಂಗ್ರೆಸ್ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಇನ್ನು ಇದೇ ವೇಳೆ ಮಾತನಾಡಿದ ಅವರು ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿ ಗೆ ಕೌನ್ಸಿಲ್ ‌ಮಾನ್ಯತೆ ಕೊಡಿಸಿದ್ದೇನೆ. ಜೆಡಿಎಸ್ ನವರಿಗೆ ಕಟ್ಟಡಗಳನ್ನು ಕಟ್ಟಿಸಿ ದುಡ್ಡು ಮಾಡುವುದೇ ಕೆಲಸವಾಗಿದೆ. ಕುಮಾರಸ್ವಾಮಿ ಮತ್ತು ಡಿಕೆಶಿ ಇಬ್ಬರು ತಾವು ಜೊಡೆತ್ತು ಎಂದು  ಸ್ವಯಂ ಘೋಷಣೆ ಮಾಡಿ ಹೊರಟಿದ್ದಾರೆ. ಒಂದು ಕರಿ ಎತ್ತು , ಮತ್ತೊಂದು ಬಿಳಿ ಎತ್ತು ಹೊರಟಿವೆ ಎಂದು ವ್ಯಂಗ್ಯವಾಡಿದ್ದಾರೆ. 

ಹಾಸನ, ಮಂಡ್ಯ ತುಮಕೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದು ಅವರು ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಮತಗಳು ನಮ್ಮ ಪರವಾಗಿವೆ. ರಾಜ್ಯದಲ್ಲಿ ಬಿಜೆಪಿ 23  ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಮಂಜು ಭರವಸೆ ವ್ಯಕ್ತಪಡಿಸಿದರು. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

click me!