‘ಬಿಜೆಪಿ ಗೆಲುವು ನಿಶ್ಚಿತ : ಕಾಂಗ್ರೆಸ್ ಸೋಲಿಸುವುದು ಖಚಿತ’

Published : Mar 28, 2019, 12:12 PM IST
‘ಬಿಜೆಪಿ ಗೆಲುವು ನಿಶ್ಚಿತ : ಕಾಂಗ್ರೆಸ್ ಸೋಲಿಸುವುದು ಖಚಿತ’

ಸಾರಾಂಶ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ಪರಸ್ಪರ ಅಭ್ಯರ್ಥಿಗಳಲ್ಲಿ ಗೆಲುವಿನ ಹುಮ್ಮಸ್ಸು ಹೆಚ್ಚಿದ್ದು, ಇದೀಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಲಿಕಯ್ಯ ಗುತ್ತೇದಾರ್ ಕಲಬುರಗಿಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಸೇಡಂ: ಮಂಡ್ಯ- ರಾಮನಗರಗಳಲ್ಲಿ ಜೋಡೆತ್ತು ವಿಚಾರ ಬಿಸಿಬಿಸಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಕಲಬುರಗಿಯಲ್ಲೂ ಜೋಡೆತ್ತಿನ ಪ್ರಸ್ತಾಪವಾಗಿದೆ. 

ಕಲಬುರಗಿ ಲೋಕಸಭಾ  ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾಪದ ಕೊಡ ತುಂಬಿದ್ದು ಅವರನ್ನು ಸೋಲಿಸಿ ಮನೆಗೆ ಕಳಿಸುವವರೆಗೂ ತಾವು ಹಾಗೂ ಮಾಲೀಕಯ್ಯಾ ಗುತ್ತೇದಾರ್ ಜೋಡೆತ್ತಿನ ರೀತಿಯಲ್ಲಿ ದುಡಿಯುತ್ತೇವೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ತಿಳಿಸಿದ್ದಾರೆ. 

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಮತ್ತು ಬಾಬುರಾವ್ ಚಿಂಚನಸೂರ್ ಜೋಡೆತ್ತುಗಳಿದ್ದಂತೆ. ಖರ್ಗೆ ಅವನತಿ ಆರಂಭವಾಗಿದ್ದು ಬರುವ ದಿನಗಳಲ್ಲಿ ಕಲಬುರಗಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!