ಬಿಜೆಪಿ ತೊರೆಯುವ ಬೆದರಿಕೆ ಒಡ್ಡಿದ ಮುಖಂಡ

Published : Apr 23, 2019, 10:20 AM IST
ಬಿಜೆಪಿ ತೊರೆಯುವ ಬೆದರಿಕೆ ಒಡ್ಡಿದ ಮುಖಂಡ

ಸಾರಾಂಶ

ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರೋರ್ವರು ಪಕ್ಷ ತೊರೆಯುವ ಬೆದರಿಕೆ ಒಡ್ಡಿದ್ದಾರೆ. 

ನವದೆಹಲಿ : ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಬಿಜೆಪಿ ಮುಖಂಡರೋರ್ವರು ಬಿಗ್ ಶಾಕ್ ನೀಡಿದ್ದಾರೆ. 

ಲೋಕಸಭಾ ಚುನಾವಣೆಗೆ ಟಿಕೆಟ್ ನೀಡದಿದ್ದಲ್ಲಿ ಪಕ್ಷ ತೊರೆಯುವುದಾಗಿ ಬಿಜೆಪಿ ಹಾಲಿ ಸಂಸದ ಉದಿತ್ ರಾಜ್ ಬೆದರಿಕೆ ಒಡ್ಡಿದ್ದಾರೆ. ಚುನಾವಣಾ ಟಿಕೆಟ್ ಗಾಗಿ ಕಾಯುತ್ತಿದ್ದು, ಒಂದು ವೇಳೆ ತಮಗೆ ಟಿಕೆಟ್ ದೊರೆಯದಿದ್ದಲ್ಲಿ  ಪಕ್ಷ ತೊರೆಯುವುದಾಗಿ ಹೇಳಿ ಟ್ವೀಟ್ ಮಾಡಿದ್ದಾರೆ. 

ಈ ಹಿಂದೆಯೇ ತಮ್ಮ ಕ್ಷೇತ್ರ ಹೊರತುಪಡಿಸಿ ಬೇರೆ ಕ್ಷೇತ್ರದಿಂದ ಟಿಕೆಟ್ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇದುವರೆಗೂ ಟಹೆಸರು ಘೊಷಣೆಯಾಗಿಲ್ಲ. ಇದೀಗ ತಮ್ಮ ಸ್ವ ಕ್ಷೇತ್ರದಿಂದಲೇ ಟಿಕೆಟ್ ದೊರೆಯಬಹುದಾದ ಭರವಸೆ ಇದ್ದು, ಒಂದು ವೇಳೆ ಹೆಸರು ಘೋಷಣೆಯಾಗದಿದ್ದಲ್ಲಿ  ಪಕ್ಷ ತೊರೆಯುವುದು ಖಚಿತ ಎಂದಿದ್ದಾರೆ.   

 

ಉದಿತ್ ರಾಜ್ ನಾರ್ಥ್ ವೆಸ್ಟ್ ದಿಲ್ಲಿ ಸಂಸದರಾಗಿದ್ದು,  ಇನ್ನೂ ಈ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆಯಾಗಿಲ್ಲ. ಇನ್ನಷ್ಟೇ ಅಭ್ಯರ್ಥಿ ಘೋಷಣೆಯಾಗಬೇಕಿದೆ.

ತನ್ನ ಕ್ಷೇತ್ರದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ತಾವು ಕರ್ತವ್ಯ ನಿರ್ವಹಣೆ ಮಾಡಿದ್ದು, ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆದಿವೆ.  ಆದ್ದರಿಂದ ಮತ್ತೆ ಈ ಕ್ಷೇತ್ರದಿಂದ ಕಣಕ್ಕಿಳಿಯುವ ಆಸೆ ತಮ್ಮಲ್ಲಿದೆ ಎಂದಿದ್ದಾರೆ.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!