ಅನುಮಾನಕ್ಕೆ ಕಾರಣವಾದ ಮಂಡ್ಯ ಸಂಸದ ಶಿವರಾಮೇಗೌಡ ಹೇಳಿಕೆ

By Web DeskFirst Published Apr 15, 2019, 11:19 AM IST
Highlights

ಲೋಕಸಭಾ ಚುನಾವಣೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿರುವ ಈ ಸಂದರ್ಭದಲ್ಲಿ ಮಂಡ್ಯ ಸಂಸದ ಶಿವರಾಮೇಗೌಡ ಹೇಳಿಕೆಯೊಂದು ಅನುಮಾನಕ್ಕೆ ಕಾರಣವಾಗಿದೆ. 

ಮಂಡ್ಯ:  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ.  ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. 

ಇದೇ ವೇಳೆ ಮಂಡ್ಯ ಸಂಸದ ಶಿವರಾಮೇಗೌಡ ಹೇಳಿಕೆಯೊಂದು ಅನುಮಾನಕ್ಕೆ ಕಾರಣವಾಗಿದೆ. ಪ್ರಚಾರಕ್ಕೆ ಹೊರಗಿನಿಂದ ಜನರನ್ನು ಕರೆದುಕೊಂಡು ಬಂದರೆ 500 ರು. ಕೊಡುವುದಾಗಿ ಶಿವರಾಮೇಗೌಡರು ಹೇಳಿದ ಆಡಿಯೋ ವೈರಲ್ ಆಗಿದೆ. 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕನ ಚೀಣ್ಯ ಗ್ರಾಮದವರಾದ  ಡಾನ್ ರಮೇಶ್ ಎನ್ನುವ ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ. ಎಲ್ಲರನದನು ಕರೆದುಕೊಂಡು ಬನ್ನಿ ತಲೆಗೆ 500 ಕೊಡುತ್ತೇವೆ ಎಂದಿದ್ದಾರೆ. 

ಶಿವರಾಮೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾನ್ ರಮೇಶ್ ಬಸ್ ವ್ಯವಸ್ಥೆ ಮಾಡಿ ಕರೆದುಕೊಂಡು ಬರಬೇಕು ಎಂದು ಹೇಳಿದ್ದಾರೆ. ಇದರಿಂದ ಜನರನ್ನು ಹೊರಗಿನಿಂದ ಕರೆದುಕೊಂಡು ಬಂದು ಪ್ರಚಾರ ಮಾಡಲಾಗುತ್ತಿದೆಯಾ ಎನ್ನುವ ಅನುಮಾನ ಮೂಡಿದೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!