2019ರ ಲೋಕಸಭಾ ಚುನಾವಣೆಗೆ ಧುಮುಕಿದ ಕ್ರೀಡಾಪಟುಗಳ ಪೈಕಿ ಬಾಕ್ಸರ್ ವಿಜೇಂದರ್ ಸಿಂಗ್ ಅದೃಷ್ಠ ಕೈಹಿಡಿದಿಲ್ಲ. ದಕ್ಷಿಣ ದೆಹಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಜೇಂದರ್ ಸಿಂಗ್ ಸೋಲಿಗೆ ಕಾರಣವಾಗಿದ್ದು ಯಾರು? ಇಲ್ಲಿದೆ ವಿವರ.
ದೆಹಲಿ(ಮೇ.23): ಬಾಕ್ಸಿಂಗ್ ರಿಂಗ್‌ನಲ್ಲಿ ಎದುರಾಳಿಗಳನ್ನ ನಿರಾಯಾಸವಾಗಿ ಮಣಿಸುತ್ತಿದ್ದ ಬಾಕ್ಸರ್ ವಿಜೇಂದರ್ ಸಿಂಗ್‌ಗೆ ಲೋಕಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ದಕ್ಷಿಣ ದೆಹಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿಜೇಂದರ್ ಸಿಂಗ್ ಸೋಲು ಅನುಭವಿಸಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆಗಿಳಿದ ಬಾಕ್ಸರ್‌ಗೆ ಆರಂಭದಲ್ಲೇ ಮುಖಭಂಗವಾಗಿದೆ.
undefined
ವಿಜೇಂದರ್ ಸಿಂಗ್ ಕೇವಲ 30,180 ಮತಗಳಿಸಿದ್ದಾರೆ. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಗೆಲುವು ಸಾಧಿಸಿದ್ದಾರೆ. ರಮೇಶ್ 1,07,403 ಮತಗಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ ರಾಘವ್ ಚಡ್ಡಾ 54,665 ಮತ ಗಳಿಸಿದ್ದಾರೆ. ಸ್ಪರ್ಧಿಸಿದ್ದರು. ಜಿದ್ದಾ ಜಿದ್ದಿನ ಹೋರಾಟದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಗೆಲುವಿನ ನಗೆ ಬೀರಿದ್ದಾರೆ. 2014ರಲ್ಲೂ ರಮೇಶ್ ಬಿಧೂರಿ ಬರೋಬ್ಬರಿ 1.07 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಎಪ್ರಿಲ್ 22 ರಂದು ಕಾಂಗ್ರೆಸ್ ದೆಹಲಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ದಕ್ಷಿಣ ದೆಹಲಿಯಿಂದ ಬಾಕ್ಸರ್ ವಿಜೇಂದರ್ ಸಿಂಗ್‌ಗೆ ಟಿಕೆಟ್ ನೀಡಲಾಗಿತ್ತು. ಸದ್ಯ ಹರ್ಯಾಣದ ಸೂಪರಿಡೆಂಟ್ ಪೋಲೀಸ್ ಆಗಿರುವ ವಿಜೇಂದರ್‌ಗೆ ಮತದಾರರು ಕೈಹಿಡಿಯಲಿಲ್ಲ.