ಈ ನಟಿ ಪ್ರಚಾರ ಮಾಡಿದ ಅಭ್ಯರ್ಥಿಗಳಿಗೆಲ್ಲಾ ಸೋಲೇ ಸೋಲು!

Published : May 23, 2019, 07:12 PM ISTUpdated : May 23, 2019, 07:14 PM IST
ಈ ನಟಿ ಪ್ರಚಾರ ಮಾಡಿದ ಅಭ್ಯರ್ಥಿಗಳಿಗೆಲ್ಲಾ ಸೋಲೇ ಸೋಲು!

ಸಾರಾಂಶ

ಬಾಲಿವುಡ್‌ನ ಈ ನಟಿ ಯಾರ ಪರವೆಲ್ಲಾ ಪ್ರಚಾರ ನಡೆಸಿದ್ದರೋ ಆ ಎಲ್ಲಾ ಅಭ್ಯರ್ಥಿಗಳಿಗೆ ಸೋಲು| ಭೋಪಾಲ್, ಬಿಹಾರ, ದೆಹಲಿಯಲ್ಲಿ ಪ್ರಚಾರ ನಡೆಸಿದ್ದ ನಟಿ| ಅಭ್ಯರ್ಥಿ ಪರ ಮತ ಯಾಚಿಸಿದರೂ ಗೆಲುವು ತಂದುಕೊಡುವಲ್ಲಿ ವಿಫಲ!

ನವದೆಹಲಿ[ಮೇ.23]: ಈ ಒಬ್ಬ ಬಾಲಿವುಡ್ ನಟಿ 2019ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾರೀ ಸೌಂಡ್ ಮಾಡಿದ್ದರು. ಕೆಲ ಆಯ್ದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದ ಈಕೆ ರೋಡ್ ಶೋ, ಸಮಾವೇಶಗಳಲ್ಲಿ ಭಾಗವಹಿಸಿ ಮತ ಯಾಚಿಸಿದ್ದರು. ಆದರೀಗ ಈ ನಟಿ ಯಾರ ಪರವಾಗಿ ಪ್ರಚಾರ ನಡೆಸಿದ್ದರೋ ಅವರಾರು ಗೆದ್ದಿಲ್ಲ ಎಂಬುವುದೇ ಚ್ಚರಿಯ ವಿಚಾರ.

ಹೌದು ಈ ಬಾರಿ ಲೋಕ ಅಖಾಡದಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಭಾರೀ ಸೌಂಡ್ ಮಾಡಿದ್ದರು. ಇವರ ಆಗಮನದಿಂದ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆದರೆ ಪ್ರಚಾರ ಮಾಡಿದ ಅಭ್ಯರ್ಥಿಗಳು ಗೆಲ್ಲಲು ಯಶಸ್ವಿಯಾಗಿಲ್ಲ. ಹಾಗಾದ್ರೆ ಸ್ವರಾ ಭಾಸ್ಕರ್ ಯಾರ ಪರ ಪ್ರಚಾರ ನಡೆಸಿದ್ದರು? ಇಲ್ಲಿದೆ ಪಟ್ಟಿ

ಭೋಪಾಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೈ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪರ ಸ್ವರಾ ಭಾಸ್ಕರ್ ಪ್ರಚಾರ ನಡೆಸಿದ್ದರು. ಆದರೀಗ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಬಿಹಾರದ ಬೆಗುಸರೈ ಕ್ಷೇತ್ರದಿಂದ CPI ನಿಂದ ಸ್ಪರ್ಧಿಸಿದ್ದ ಕನ್ಹಯ್ಯಾ ಕುಮಾರ್ ಪರವಾಗಿಯೂ ಸ್ವರಾ ಪ್ರಚಾರ ನಡೆಸಿದ್ದರು. ಆದರೆ ಈ ಯುವ ನಾಯಕನೂ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ವಿರುದ್ಧ ಸೋಲನುಭವಿಸಿದ್ದಾರೆ. 

ಇದಾದ ಬಳಿಕ ಸ್ವರಾ ಪ್ರಚಾರ ನಡೆಸಿದ್ದು ಆಮ್ ಆದ್ಮಿ ಪಕ್ಷದ ಆತಿಶಿ ಪರ. ಆದರೆ ಆತಿಶಿ ಕೂಡಾ ಈ ಬಾರಿಯ ಚುನಾವಣೆಯಲ್ಲಿ ಸೋಲುಂಡಿದ್ದಾರೆ.

ಕೊನೆಯದಾಗಿ ಆಮ್ ಆದ್ಮಿ ಪಕ್ಷದ, ಯುವ ನಾಯಕ ರಾಘವ್ ಚಡ್ಡಾ ಪರವಾಗಿಯೂ ಮತ ಯಾಚನೆ ನಡೆಸಿದ್ದರು. ದುರಾದೃಷ್ಟವಶಾತ್ ರಾಘವ್ ಕೂಡಾ ಸೋಲನುಭವಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!