ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿಗೆ ನೋಟಿಸ್

By Web DeskFirst Published Mar 13, 2019, 11:12 PM IST
Highlights

 ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಅರಸೀಕೆರೆಯ ಕೋಡಿಮಠದ ಶ್ರೀಗಳಿಗೆ ನೋಟಿಸ್ ನೀಡಲಾಗಿದೆ.

ಯಾದಗಿರಿ[ಮಾ.13]  ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರು ಕೋಡಿಮಠದ ಶ್ರೀಗಳಿಗೆ ನೋಟಿಸ್ ನೀಡಿದ್ದಾರೆ.  ಯಾದಗಿರಿ ತಾಲೂಕಿನ ಅಬ್ಬೆತುಮಕೂರನ ಜಾತ್ರೆಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಭವಿಷ್ಯ ನುಡಿದಿದ್ದ ಶ್ರೀಗಳಿಗೆ ನೋಟಿಸ್ ನೀಡಲಾಗಿದೆ. ಮಾರ್ಚ್ 11 ರಂದು ನಡೆದ ಜಾತ್ರೆಯಲ್ಲಿ ಶ್ರೀಗಳು ಭವಿಷ್ಯ ಹೇಳಿದ್ದರು.

 "ಸತ್ಯ ವಿಷದಂತೆ ಇರುತ್ತೆ, ಕುರುವಂಶ ದೊರೆಗಳು ಬಡಿದಾಡ್ಯಾರು, ಪಾಂಡವರು ಕೌರವರು ಬಡಿದಾಡ್ಯಾರು, ರತ್ನ ಖಚಿತ  ಸುವರ್ಣ ಕಿರೀಟ ಸ್ಥಿರವಾದಿತು.." ಎಂದು ಭವಿಷ್ಯ ನುಡಿದಿದ್ದ ಭವಿಷ್ಯ ಶ್ರೀಗಳಿಕೆ ಉತ್ತರ ನೀಡುವ ಪ್ರಮೇಯ ತಂದೊಡ್ಡಿದೆ. ಪರೋಕ್ಷವಾಗಿ ಮತ್ತೆ ಮೋದಿ ಪ್ರಧಾನಿ ಆಗುತ್ತಾರೆ ಎಂಬ ಅರ್ಥ ಇದಕ್ಕೆ ಬಂದಿತ್ತು.

ದೋಸ್ತಿ ಸೀಟು ಹಂಚಿಕೆ ಫೈನಲ್: ಕಾಂಗ್ರೆಸ್ ಗೆ 20, JDSಗೆ 8 ಸ್ಥಾನ..!

ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ  ಚುನಾವಣಾ ಆಯುಕ್ತರ ಸೂಚನೆ ಮೇರೆಗೆ ನೊಟೀಸ್ ನೀಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ಪಿಸಿಐ ವೀರಣ್ಣ ಮಗ್ಗಿ ಅವರಿಂದ ಭವಿಷ್ಯ ಹೇಳಿದ ಬಗ್ಗೆ ಸಮಾಜಾಯಿಸಿ ನೀಡಲು ಶ್ರೀಗಳಿಗೆ ಕೇಳಿಕೊಳ್ಳಲಾಗಿದೆ.  ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಭವಿಷ್ಯ ಹೇಳಿ ಮತದಾರರ ಮೇಲೆ ಪ್ರಭಾವ ಬೀರುವ ರೀತಿ ಭವಿಷ್ಯ ನುಡಿದಕ್ಕೆ ನೋಟೀಸ್ ನೀಡಲಾಗಿದ್ದು  48 ಗಂಟೆಯೊಳಗೆ ಉತ್ತರಿಸುವಂತೆ ಕೇಳಿಕೊಳ್ಳಲಾಗಿದೆ.

click me!