ನನಗೆ ಒಂದು ಮಾತು ಹೇಳದೆ ಬಿಜೆಪಿಗೆ ಹೋದ ನಾಯಕ : ಸಿದ್ದು ಬೇಸರ

By Web DeskFirst Published Mar 21, 2019, 11:30 AM IST
Highlights

ಲೋಕಸಭಾ ಚುನಾವಣೆ ಸಮೀಪಿಸಿದ್ದು, ಇದೇ ವೇಳೇ ವಿವಿಧ ಪಕ್ಷಗಳಲ್ಲಿ ಮುಖಂಡರ ವಲಸೆಯು ನಡೆಯುತ್ತಿದೆ. ಕಾಂಗ್ರೆಸ್ ಮುಖಂಡ ಎ. ಮಂಜು ಬಿಜೆಪಿ ಸೇರ್ಪಡೆಯಾಗಿದ್ದು, ಈ ಸಂಬಂಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು :  ಇತ್ತೀಚೆಗಷ್ಟೆಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಮಾಜಿ ಸಚಿವ ಎ.ಮಂಜು ಅವರ ರಾಜಕೀಯ ನಡೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಹಾಸನ ಮತ್ತು ಮಂಡ್ಯ ಜಿಲ್ಲಾ ಮುಖಂಡರ ಸಭೆಯಲ್ಲಿ ನಡೆದಿದೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನದ ನನ್ನ ಸ್ನೇಹಿತರಾದ ಪುಟ್ಟಸ್ವಾಮಿ ಮತ್ತಿತರರು ಎ.ಮಂಜುಗೆ ಟಿಕೆಟ್‌ ಕೊಡಬೇಡಿ ಎಂದಿದ್ದರು. ಆದರೂ, ಅವರ ವಿರೋಧ ಕಟ್ಟಿಕೊಂಡು ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಟಿಕೆಟ್‌ ಕೊಡಿಸಿ ಅವರ ಪರ ಪ್ರಚಾರವನ್ನೂ ಮಾಡಿ ಗೆಲ್ಲಿಸಿದೆ. ನಂತರ ನನ್ನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನೂ ನೀಡಿದೆ. ಆದರೂ, ಎ.ಮಂಜು ಪಕ್ಷ ತೊರೆಯುವಾಗ ಸೌಜನ್ಯಕ್ಕೂ ನನಗೆ ಹೇಳಲಿಲ್ಲ. ನಮಗೆ ಸಿಗುವವರೆಲ್ಲಾ ಇಂತಹವರೇ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಪಕ್ಷದ ಮುಖಂಡರೊಬ್ಬರು ಎ.ಮಂಜು ಬಿಜೆಪಿ ಸೇರುತ್ತಿದ್ದಾರೆಂಬ ಮಾಹಿತಿ ನೀಡಿದ್ದರು. ಆಗ ಖುದ್ದು ನಾನೇ ಎ.ಮಂಜು ಅವರಿಗೆ ಕೇಳಿದಾಗಲೂ ಹೇಳಲಿಲ್ಲ. ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದು ಹೇಳಿದ್ದರು. ನಂತರ ಕೂಡ ಒಂದು ಮಾತು ಹೇಳದೆ ಬಿಜೆಪಿ ಸೇರಿಕೊಂಡಿದ್ದಾರೆ. ನಾವೇ ಬೆಳೆಸಿದರು ಈ ರೀತಿ ಮಾಡಿದಾಗ ಬಹಳ ಬೇಸರವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ

click me!