ಮೋದಿಗ್ಯಾಕೆ ಮತ ಹಾಕಬೇಕು : ಯುವಕರಲ್ಲಿ ಪ್ರಶ್ನೆ ಮಾಡಿದ ಪ್ರಜ್ವಲ್

By Web DeskFirst Published Apr 7, 2019, 12:46 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಹಾನಸದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿದಿದ್ದು, ಹಳ್ಳಿಗಳಲ್ಲಿ ಭರ್ಜರಿ ಮತಯಾಚನೆಯಲ್ಲಿ ತೊಡಗಿದ್ದಾರೆ. 

ಹಾಸನ : ಹಾಸನ ಮೈತ್ರಿ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಕಣಕ್ಕೆ  ಇಳಿದಿರುವ ಪ್ರಜ್ವಲ್ ರೇವಣ್ಣ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಹೊಳೆನರಸೀಪುರ ತಾಲೂಕಿನ ಆಲನಗೌಡನಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. 

ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದು, ಮೋದಿಗೆ ಯಾಕೆ ವೋಟ್ ಮಾಡಬೇಕು ಎಂದು ಮತದಾರರದಲ್ಲಿ ಪ್ರಶ್ನೆ ಮಾಡಿದ್ದಾರೆ.

ಮೋದಿ.. ಮೋದಿ.. ಅನ್ನೋ ಭಾವನೆಯಲ್ಲಿರುವ ಯುವಕರು ಅರ್ಥೈಸಿಕೊಳ್ಳಬೇಕು.  ವರ್ಷಕ್ಕೆ 2 ಕೋಟಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿಯೇ ಹೇಳಿದ್ದರು. 

ಐದು ವರ್ಷಕ್ಕೆ 5 ಕೋಟಿ ಉದ್ಯೋಗ ಸೃಷ್ಠಿ ಮಾಡಬೇಕಿತ್ತು.  ಯಾರಾದರು ಒಬ್ಬರು ಮೋದಿ ಹೆರು ಹೇಳಿ ಕೆಲಸಕ್ಕೆ ಹೋಗುತ್ತಿದ್ದಾರಾ ಎಂದು ಕೇಳಿದರು. 

ಸುಳ್ಳಿನ ಸುರಿಮಳೆಗಳನ್ನು ಹರಿಸುವುದಲ್ಲ. ಸುಳ್ಳಿನ ಕೆರೆ ಸುಳ್ಳಿನ ಸಮುದ್ರವನ್ನೇ ಸೇರಬೇಕು. ರೈತರಿಗೆ ಉಚಿತವಾಗಿ ಬ್ಯಾಂಕ್ ಖಾತೆ ತೆರೆಸಿ 15 ಹಣ ಹಾಕುತ್ತೇನೆ ಎಂದು ಹೇಳಿದರು.  ಐದು ವರ್ಷವಾದರೂ ಕೂಡ ಯಾವುದೇ ಹಣವನ್ನು ಹಾಕಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!