ಮಂಡ್ಯ-ತುಮಕೂರಿನ ಫಲಿತಾಂಶದ ಭವಿಷ್ಯ : ಯಾರಿಗೆ ಸೋಲು, ಯಾರಿಗೆ ಗೆಲುವು..?

Published : May 17, 2019, 01:31 PM ISTUpdated : May 17, 2019, 01:37 PM IST
ಮಂಡ್ಯ-ತುಮಕೂರಿನ ಫಲಿತಾಂಶದ ಭವಿಷ್ಯ : ಯಾರಿಗೆ ಸೋಲು, ಯಾರಿಗೆ ಗೆಲುವು..?

ಸಾರಾಂಶ

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಇದೇ ವೇಳೆ ಸೋಲು ಗೆಲುವಿನ ಲೆಕ್ಕಾಚಾರಗಳೂ ಕೂಡ ಜೋರಾಗಿದೆ. ಜನರು ಚುನಾವಣಾ ಭವಿಷ್ಯದ ಬಗ್ಗೆ ಕುತೂಹಲಗೊಂಡು ಜ್ಯೋತಿಷ್ಯ ಭವಿಷ್ಯದ ಮೊರೆ ಹೋಗಿದ್ದಾರೆ. 

ಕೋಲಾರ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಇದೇ ವೇಳೆ ಅಭ್ಯರ್ಥಿಗಳ ಸೋಲು ಗೆಲುವಿನ ಬಗ್ಗೆ ಕುತೂಹಲದಲ್ಲಿ ಜನತೆ  ಭವಿಷ್ಯ, ಜ್ಯೋತಿಷ್ಯದ ಮೊರೆ ಹೋಗಿದ್ದಾರೆ 

ಕೋಲಾರ ತಾಲೂಕಿನ ಅಮ್ಮನಲ್ಲೂರು ಗ್ರಾಮದಲ್ಲಿ ತೆಂಗಿನ ಕಾಯಿ ಕೋಲು ಶಾಸ್ತ್ರದ ಮೂಲಕ ಪ್ರಮುಖ ಕ್ಷೇತ್ರಗಳ ಚುನಾವಣಾ ಭವಿಷ್ಯ ನೋಡಲಾಗಿದೆ. 

ಹಾನಸ, ತುಮಕೂರು, ಮಂಡ್ಯ, ಕೋಲಾರದ ಬಗ್ಗೆ ತೆಂಗಿನ ಕಾಯಿ ಶಾಸ್ತ್ರ ನೋಡಿದ್ದು, ಇಲ್ಲಿನ ಅಭ್ಯರ್ಥಿಗಳ ಸೋಲು ಗೆಲುವಿನ ಬಗ್ಗೆ ತಿಳಿಯುತ್ತಿದ್ದಾರೆ. 

ತೆಂಗಿನ ಕಾಯಿ ಕೋಲು ಶಾಸ್ತ್ರವು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಗೆಲುವು ಖಚಿತ ಎಂದು  ಭವಿಷ್ಯ ನುಡಿದಿದೆ. ಇತ್ತ ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ದೇವೇಗೌಡರು ಸೋಲಲಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದೆ. 
 
ಗೆಲುವು ಪಡೆಯುವುದಾದಲ್ಲಿ ತೆಂಗಿನಕಾಯಿ ಗಿರಗಿರನೆ ತಿರುಗುವ ಮೂಲಕ ಚುನಾವಣಾ ಭವಿಷ್ಯ ತಿಳಿಸಿದೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!