ಲೋಕಸಭಾ ಚುನಾವಣೆ : ಕೊಪ್ಪಳ ಟಿಕೆಟ್ ಗೆ ಅಪ್ಪ-ಮಗನ ನಡುವೆ ಪೈಪೋಟಿ

Published : Mar 11, 2019, 03:28 PM IST
ಲೋಕಸಭಾ ಚುನಾವಣೆ : ಕೊಪ್ಪಳ ಟಿಕೆಟ್ ಗೆ ಅಪ್ಪ-ಮಗನ ನಡುವೆ ಪೈಪೋಟಿ

ಸಾರಾಂಶ

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಇದೇ ವೇಳೆ ಕೊಪ್ಪಳ ಲೋಕಸಭಾ ಟಿಕೆಟ್ ಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. 

ಕೊಪ್ಪಳ :  ಕೊಪ್ಪಳ ಲೋಕಸಭೆಯಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡುವಂತೆ ಜಿಲ್ಲಾ ನಾಯಕರು ಒತ್ತಾಯ ಮಾಡುತ್ತಿದ್ದು, ಟಿಕೆಟ್ ಅಸಮಾಧಾನ ಬಗೆಹರಿಯದಿದ್ದರೆ ಸ್ಪರ್ಧಿಸುವಂತೆ ಕೇಳುತ್ತಿದ್ದಾರೆ. 

ಕೊಪ್ಪಳ‌ ಲೋಕಸಭಾ ಟಿಕೆಟ್ ಗಾಗಿ ತಂದೆ, ಮಗನ ನಡುವೆಯೇ ಪೈಪೋಟಿ ಎದುರಾಗಿದ್ದು, ಇದೇ ಗೊಂದಲಕ್ಕೆ ಕಾರಣವಾಗಿದೆ.

ತಂದೆ ಬಸವರಾಜ್ ಹಿಟ್ನಾಳ್ ಹಾಗೂ ಮಗ ರಾಜಶೇಖರ್ ಹಿಟ್ನಾಳ್ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಹಿಟ್ನಾಳ ಕುಟುಂಬ ದಿಲ್ಲಿಗೂ ತೆರಳಿದೆ. 

ಕಾಂಗ್ರೆಸ್ ಸಂಭಾವ್ಯರ ಪಟ್ಟಿಯಲ್ಲಿ ರಾಜಶೇಖರ್ ಹಿಟ್ನಾಳ್ ಹೆಸರು ಇರದ್ದಿದ್ದಕ್ಕೆ ತೀವ್ರ  ನಿರಾಸೆಗೊಂಡಿದ್ದು, ಇದರಿಂದ ದಿಲ್ಲಿಗೆ ತೆರಳಿ ಹೈ ಕಮಾಂಡ್ ಬಳಿ ಚರ್ಚಿಸುವ ಸಾಧ್ಯತೆ ಇದೆ. 

ಇದರಿಂದ ಕೊಪ್ಪಳ ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಗೊಂದಲವೇರ್ಪಟ್ಟಿದ್ದು, ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಡ ಹೇರಲಾಗುತ್ತಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!