ವಿವಾದಕ್ಕೆ ಕಾರಣವಾಯ್ತು ಲೋಕಸಭಾ ಚುನಾವಣಾ ದಿನಾಂಕ

By Web DeskFirst Published Mar 11, 2019, 2:34 PM IST
Highlights

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಚುನಾವಣೆ ನಡೆಯುವ ದಿನಾಂಕದ ಸಂದರ್ಭದಲ್ಲಿಯೇ ರಮಜಾನ್ ಇದ್ದು, ಇದರಿಂದ ಮತದಾನದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಆರೋಪ  ಕೇಳಿ ಬಂದಿದೆ. 

ನವದೆಹಲಿ : 2019ನೇ ಸಾಲಿನ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ.  ಆದರೆ ಇದೀಗ ಲೋಕಸಭಾ ಚುನಾವಣಾ ದಿನಾಂಕವು ವಿವಾದಕ್ಕೆ ಕಾರಣವಾಗಿದೆ. 

ರಮಜಾನ್ ಸಂದರ್ಭದಲ್ಲಿಯೇ  ಲೋಕಸಭಾ ಚುನಾವಣೆ ನಡೆಸುವ ಹಿಂದೆ ಹುನ್ನಾರವಿದ್ದು, ಬಿಜೆಪಿ ಇದರಿಂದ ಲಾಭವಾಗಲಿದೆ. ಅಲ್ಪಸಂಖ್ಯಾತ ಮತಗಳು ಬಿಜೆಪಿ ಪರವಾಗಿಲ್ಲದ ಕಾರಣ ಈ ರೀತಿ ದಿನಾಂಕ ಘೋಷಣೆ ಮಾಡಲಾಗಿದೆ ಎಂದು ಮುಸ್ಲಿಂ ಕ್ಲೆರಿಕ್ ಹಾಗೂ ಟಿಎಂಸಿ ಮುಖಂಡ ಪರ್ಹಾದ್ ಹಕೀಮ್ ಆರೋಪಿಸಿದ್ದಾರೆ.  

ರಮಜಾನ್ ಸಂದರ್ಭದಲ್ಲಿ ಮತ ಚಲಾವಣೆ ಮಾಡಲು ಉಪವಾಸ ನಿರತ ಮುಸ್ಲಿಮರು ಬಂದು ಬೂತ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ. ಇದರಿಂದ ಮತದಾನದಿಂದ ಹಿಂದೆ ಸರಿಯಬೇಕಾಗುತ್ತದೆ. 

ಮೇ 6, 12, 19 ರಂದು ರಮಜಾನ್ ತಿಂಗಳಾಗಿದ್ದು, ಈ ವೇಳೆ ಉಪವಾಸವಿರುವುದರಿಂದ ಮತ ಚಲಾವಣೆಗೆ ಆಗಮಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ  ದಿನಾಂಕಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ. 

ಮೇ 6 ರಿಂದಲೇ ಉಪವಾಸ ಆರಂಭವಾಗುತ್ತದೆ. ಚುನಾವಣಾ ಆಯೋಗ ಈ ವಿಚಾರವನ್ನು ತಲೆಯಲ್ಲಿರಿಸಿಕೊಳ್ಳಬೇಕಿತ್ತು ಎಂದು ಪಿರ್ಹಾದ್ ಹಕೀಮ್  ಹೇಳಿದ್ದಾರೆ. 

ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಏಪ್ರಿಲ್ 11ಕ್ಕೆ ಆರಂಭವಾಗಿ  ಮೇ19ಕ್ಕೆ ಮುಕ್ತಾಯವಾಗಲಿದೆ.  ಮೇ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

click me!