ಅಮೆರಿಕದಿಂದ ಬಂದು ಮತದಾನ ಮಾಡಿ ಕರ್ತವ್ಯ ಮೆರೆದ ಧಾರವಾಡದ ಕುಟುಂಬ

By Web DeskFirst Published Apr 23, 2019, 11:27 AM IST
Highlights

ದೇಶದ ಪ್ರಜಾಪ್ರಭುತ್ವದ ಹಬ್ಬವಾದ ಲೋಕಸಭಾ ಚುನಾವಣೆ ಮಹಾ ಸಮರ ನಡೆಯುತ್ತಿದೆ. ಅಮೆರಿಕದಲ್ಲಿ ನೆಲೆಸಿದ ಕುಟುಂಬವೊಂದು ಆಗಮಿಸಿ ಮತದಾನ ಮಾಡಿ ತಮ್ಮ ಕರ್ತವ್ಯ ಮೆರೆದಿದೆ. 

ಧಾರವಾಡ : ಅಮೆರಿಕದಲ್ಲಿ ನೆಲೆಸಿರುವ ಕುಟುಂಬವೊಂದು ಮತದಾನ ಮಾಡುವ ಸಲುವಾಗಿ ತವರಿಗೆ ಮರಳಿಗೆ. ಧಾರವಾಡದಲ್ಲಿ ಬಂದು ಕುಟುಂಬ ಮಾಡಿದೆ. 

ಅಮೆರಿಕದಲ್ಲಿ ಇಂಜಿನಿಯರ್ ಆಗಿರುವ ನಿಹಾರ ಸಶಿತ್ತಲ ಹಾಗೂ ತಾಯಿ  ಮಂಗಲಾ ಅವರು ಧಾರವಾಡಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ. ಧಾರವಾಡದ ಸಾರಸ್ವತಪುರ ಮಾಡರ್ನ್ ಶಾಲೆಯಲ್ಲಿ ಮತ ಚಲಾಯಿಸಿದ್ದಾರೆ. 

ಮತದಾನದ ಬಳಿಕ ಮಾತನಾಡಿದ ನಿಹಾರ ಲೋಕತಂತ್ರದ ಉತ್ಸವ ಇದಾಗಿದ್ದು, ಇದಕ್ಕೆ ನಮ್ಮ ಚಿಕ್ಕ ಕೊಡುಗೆ ನೀಡಲು ಬಂದಿದ್ದೇವೆ.   ಸ್ಥಿರ ಸರ್ಕಾರ, ಸಶಕ್ತ ಸರ್ಕಾರ ಬರಲಿ ಎಂಬುದು ನಮ್ಮ ಆಶಯ. ಹೀಗಾಗಿ ಅಮೇರಿಕಾದಿಂದ ಬಂದಿದ್ದೇವೆ. ಜಾತಿ, ಮತ ನೋಡದೆ ಯಾವುದೇ ಆಮಿಷಕ್ಕೆ ಒಳಗಾಗದೆ ಎಲ್ಲರೂ ಮತ ಚಲಾಯಿಸಬೇಕು ಎಂದರು. 

ಪತ್ನಿ ಪ್ರೇಕ್ಷಾ ದೇಶಪಾಂಡೆ ಅವರ ಮತ ಮುಂಬೈನಲ್ಲಿದೆ. ಇಲ್ಲಿಂದ ಮುಂಬೈಗೆ ತೆರಳಿ ಅವರೂ ಮತ ಚಲಾಯಿಸಲಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

click me!