‘ಶೀಘ್ರವೇ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ’

By Web DeskFirst Published Apr 23, 2019, 11:09 AM IST
Highlights

ಲೋಕಸಭಾ ಚುನಾವಣೆಯ ಮಹಾ ಸಮರ ದೇಶದಲ್ಲಿ ಬಿರುಸಿನಿಂದ ಸಾಗಿದೆ. ಇದೇ ವೇಳೆ ವಿವಿಧ ಪಕ್ಷಗಳ ನಾಯಕರು ತಮ್ಮ ತಮ್ಮ ಪಕ್ಷಗಳ ಗೆಲುವಿನ ಭರವಸೆಯಲ್ಲಿದ್ದಾರೆ. 

ನವದೆಹಲಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. 

ಲೋಕಸಭಾ ಚುನಾವಣಾ ಮಹಾಸಮರದೇಶದಲ್ಲಿ ನಡೆಯುತ್ತಿದ್ದು, ಈ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರದಲು ಹೆಚ್ಚು ದಿನಗಳಿಲ್ಲ. ಅಧಿಕಾರ ವಹಿಸಿಕೊಂಡ ಬಳಿಕ  ರಫೇಲ್ ಡೀಲ್ ಹಗರಣದ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ರಾಹುಲ್ ಹೇಳಿದ್ದಾರೆ. 

ಅಲ್ಲದೇ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಮುಖಂಡರು ಹಾಗೂ ಪ್ರಧಾನಿ ನರೇಂದ್ರ ಮೋದಿ  ನಿಮ್ಮನ್ನು ಉದ್ದೇಶಿಸಿ ಮಾತನಾಡುವಾದ , ಸುಳ್ಳು ಭರವಸೆ ನೀಡುವಾಗ  ಅಂಬಾನಿಗೇಗೆ 30 ಸಾವಿರ ಕೋಟಿ ಹಣ ನೀಡಿದಿರಿ. ನಿಮಗೇನು ಅಂಬಾನಿ ಕೊಟ್ಟರು ಎಂದು ಕೇಳುವುದನ್ನು ಮರೆಯದಿರಿ ಎಂದಿದ್ದಾರೆ. 

ರಕ್ಷಣಾ ಸಚಿವಾಲಯದಿಂದ ಏನಾಗಿದೆ ಎನ್ನುವುದನ್ನು ಸಂಪೂರ್ಣ ಭಾರತವೇ ನೋಡಿದೆ ಎಂದು ವಾಗ್ದಾಳಿ ನಡೆಸಿದರು. 

ಅಲ್ಲದೇ ಅಮೇಥಿ ಬಗ್ಗೆ ಬಿಜೆಪಿ ನಿರ್ಲಕ್ಷ್ಯ ದೋರಣೆ ಹೊಂದಿದ್ದು, ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಹಿಂದೇಟು ಹಾಕುತ್ತಿದೆ.  ಆದರೆ ಅಮೇಥಿಯನ್ನು ದೇಶದ ಶೈಕ್ಷಣಿಕ ಕೇಂದ್ರವಾಗಿ ಮಾಡುವುದೇ ತಮ್ಮ ಉದ್ದೇಶ ಎಂದರು. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

click me!