ರಾಜಕೀಯ ಲಾಭಕ್ಕಾಗಿ ಅಂಬರೀಶ್ ಅಂತ್ಯಕ್ರಿಯೆ ಮಾಡಿದ್ರಾ? ಸುಮಲತಾ ಪ್ರಶ್ನೆ

Published : Mar 14, 2019, 07:53 PM ISTUpdated : Mar 14, 2019, 07:56 PM IST
ರಾಜಕೀಯ ಲಾಭಕ್ಕಾಗಿ ಅಂಬರೀಶ್ ಅಂತ್ಯಕ್ರಿಯೆ ಮಾಡಿದ್ರಾ? ಸುಮಲತಾ ಪ್ರಶ್ನೆ

ಸಾರಾಂಶ

ಮಂಡ್ಯ ರಾಜಕಾರಣ ಸಿಎಂ ಕುಮಾರಸ್ವಾಮಿ ವರ್ಸಸ್ ಸುಮಲತಾ ಅಂಬರೀಶ್ ಆಗಿ ಬದಲಾಗಿದೆ. ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಸರಿಯಾದ ತಿರುಗೇಟನ್ನೇ ನೀಡಿದ್ದಾರೆ.

ಮಂಡ್ಯ[ಮಾ. 14] ಅಂಬರೀಶ್ ಅಂತ್ಯ ಕ್ರಿಯೆ ಬಗ್ಗೆ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದ್ದಾರೆ. ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಸಲುವಾಗಿ ಅಂಬರೀಶ್ ಅಂತ್ಯಕ್ರಿಯೆ ಮಾಡಿದ್ರಾ ಸಿಎಂ ಎಂದು ಪ್ರಶ್ನೆ ಮಾಡಿದ್ದಾರೆ.

ಅಂಬರೀಶ್ ಹೆಸರನ್ನು ಯಾರು ಬಳಕೆ ಮಾಡಿಕೊಂಡು ಈ ಮಾತುಗಳು ಹೇಳ್ತಾ ಇದ್ದಾರೆ ಅನ್ನೊದು ಜನಕ್ಕೆ ಬಿಟ್ಟಿದ್ದು. ಇದನ್ನೆಲ್ಲಾ  ನಂಬೋದಕ್ಕೆ ಜನರು ಮುಠ್ಥಾಳರಲ್ಲ. ಇನ್ನೇನೂ ಪ್ರತಿಕ್ರಿಯೆ ಕೊಡಲು‌ ನಾನು ಇಷ್ಟ ಪಡುವುದಿಲ್ಲ ಎಂದಿದ್ದಾರೆ.

ಮಂಡ್ಯ ಜನಕ್ಕೆ ಸುಮಲತಾ ‘ಡಿಫರೆಂಟ್’ ಮನವಿ; ಅಮ್ಮನ ಪ್ರಚಾರಕ್ಕೆ ಮಗನ ಸಾಥ್

ನನಗೆ ಈ ರೀತಿಯ ರಾಜಕೀಯ ಮಾಡಲು ಇಷ್ಟವಿಲ್ಲ. ಎರಡು ದಿನದ ಹಿಂದೆ ಸಿಎಂ ಅವ್ರೆ ಹೇಳಿದ್ರು ನಾನು ಅಂಬರೀಶ್ ಬಗ್ಗೆ ಏನನ್ನು ಮಾತನಾಡುವುದಿಲ್ಲ ಅಂತ ಮಾತು ಕೊಟ್ಟು ಎರಡು ದಿನ ಸಹ  ಅದನ್ನು ಉಳಿಸಿಕೊಂಡಿಲ್ಲ. ಅಂಬರೀಶ್ ಗೆ ಏನ್ ಮಾಡಿದ್ರು ಅನ್ನೋದನ್ನು ಮಾತನಾಡೋದಕ್ಕಿಂತ ಮಂಡ್ಯಕ್ಕೆ ಏನು ಮಾಡುತ್ತೀನಿ ಅನ್ನೋದನ್ನು ಮಾತನಾಡಲಿ  ಎಂದು ಸವಾಲು ಹಾಕಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!