2000 ಬೈಕ್ ಜೊತೆ ಬಂದ ನಿಖಿಲ್ ಗೆ ಪುಷ್ಪ ವೃಷ್ಟಿ

Published : Mar 23, 2019, 09:48 AM IST
2000 ಬೈಕ್ ಜೊತೆ ಬಂದ ನಿಖಿಲ್ ಗೆ ಪುಷ್ಪ ವೃಷ್ಟಿ

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿಗಳ ಪ್ರಚಾರ ಕಾರ್ಯ ಜೋರಾಗಿದೆ. ಇದೇ ವೇಳೆ ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ತೆರಳಿದ್ದು, ಈ ವೇಳೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. 

ಮಂಡ್ಯ :  2000 ಬೈಕ್‌ಗಳೊಂದಿಗೆ ಬಂದ ನಿಖಿಲ್‌ಗೆ 145 ಕೇಜಿ ಸೇಬು ಹಾರ, ಪುಷ್ಪ ವೃಷ್ಟಿ ಕೆ.ಆರ್.ಪೇಟೆ: ಮಂಡ್ಯ ಲೋಕಸಭಾ ಕ್ಷೇತ್ರದ  ಮೈತ್ರಿಕೂಟದ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ನಿಖಿಲ್ ಕುಮಾರಸ್ವಾಮಿ ಕೆ.ಆರ್.ಪೇಟೆ ತಾಲೂಕಿಗೆ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. 

ತೆರದ ವಾಹನದಲ್ಲಿ ಬಂದ ನಿಖಿಲ್ ಕುಮಾರಸ್ವಾಮಿ ಅವರನ್ನು 2 ಸಾವಿರ ಬೈಕ್‌ಗಳಲ್ಲಿ ಯುವಕರು, ಕಾರ್ಯಕರ್ತರು ಪಟ್ಟಣದ ಹೊರ ವಲಯದ ಅನುವಿಮನಕಟ್ಟೆಯಿಂದ ನೀತಿಮಂಗಲ ಸರ್ಕಲ್‌ವರೆಗೆ 10 ಕಿ.ಮೀ. ರೋಡ್ ಶೋ ನಡೆಸಿದರು. 

ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಬೃಹತ್ ಇಟಾಚಿಗಳ ಮೂಲಕ ಸುಮಾರು 300 ಕೆಜಿ ತೂಕದ 12 ಸಾವಿರ ಮೌಲ್ಯದ ಚೆಂಡು ಹೂವಿನ ಪುಷ್ಪವೃಷ್ಟಿಗೆರೆದರು. ನಂತರ 145 ಕೆಜಿ ತೂಕದ 20,300 ಮೌಲ್ಯದ ಬೃಹತ್ ಗಾತ್ರದ ಸೇಬಿನ ಹಾರವನ್ನು ಕ್ರೇನ್ ಮೂಲಕ ನಿಖಿಲ್ ಅವರಿಗೆ ಹಾಕಿ ಅಭಿನಂದಿಸಿದರು. 

ವೇದಿಕೆಯ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಹೃದಯಾಘಾತದಿಂದ ನಿಧನರಾದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!