ಲೋಕಸಭಾ ಚುನಾವಣೆ : ಕೋಡಿಮಠದ ಶ್ರೀ ಭವಿಷ್ಯ ವಾಣಿ ವೈರಲ್

Published : Apr 25, 2019, 12:33 PM IST
ಲೋಕಸಭಾ ಚುನಾವಣೆ : ಕೋಡಿಮಠದ ಶ್ರೀ ಭವಿಷ್ಯ ವಾಣಿ ವೈರಲ್

ಸಾರಾಂಶ

ಲೋಕಸಭಾ ಚುನಾವಣೆ ಕಾವು ಆರಿದೆ. ಇನ್ನು ಫಲಿತಾಂಶಕ್ಕೆ ರಾಜ್ಯದಲ್ಲಿ ಅಭ್ಯರ್ಥಿಗಳು ಕಾತರರಾಗಿ ಕಾಯುತ್ತಿದ್ದಾರೆ. ಇದೇ ವೇಳೆ ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯವೊಂದು ವೈರಲ್ ಆಗಿದೆ. 

ಬಾಗಲಕೋಟೆ :  ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಕೋಡಿಮಠದ ಭವಿಷ್ಯವಾಣಿಯೊಂದು ಎಲ್ಲೆಡೆ ವೈರಲ್ ಆಗಿದೆ. 

ಬಾಗಲಕೋಟೆಯಿಂದ ಸ್ಪರ್ಧೆ ಮಾಡಿದ್ದ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನರ್ ಬಗ್ಗೆ ಭವಿಷ್ಯ ಹೇಳಿದ್ದು, ಈ ಚುನಾವಣೆಯಲ್ಲಿ ಗೆಲುವು ನಿಶ್ಚಿತವೇ  ಎನ್ನುವ ವಿಚಾರ ಚರ್ಚೆಯಾಗುತ್ತಿದೆ. 

ಕ್ಷೇತ್ರದ ಪ್ರತಿ ಚುನಾವಣಾ ಪ್ರಚಾರದಲ್ಲಿ ಸೆರಗೊಡ್ಡಿ ಬೇಡಿಕೊಳ್ಳುವೆ, ನಿಮ್ಮ ಮನೆ ಮಗಳನ್ನ ಗಲ್ಲಿಸಿ, ನನಗೆ ಆಶೀರ್ವಾದ ಮಾಡಿ  ಎಂದು ವೀಣಾ ಪ್ರಚಾರ ಮಾಡಿದ್ದು, ಭವಿಷ್ಯವಾಣಿಯಲ್ಲಿ ಸೆರಗೊಡ್ಡಿ ಬೇಡಿದವರಿಗೆ ಸಿಹಿ ಆತು ಎಂದು ಹೇಳಲಾಗಿದೆ. 

ಇನ್ನು ಕುಟುಂಬ ಸರಪಳಿ ತುಂಡಾತು,  ಕುರ್ಚಿ ಕಾಲು ಗಟ್ಟಿ ಆತು. ಸಂಸಾರ ಬಂಧ ಕತ್ತಲೆ ಕೋಣೆಗೆ ಹೋದೀತು ಎಂದು ಭವಿಷ್ಯ ನುಡಿದಿದ್ದು, ಎಲ್ಲೆಡೆ ಹರಿದಾಡುತ್ತಿದೆ. 

ಸಂಸಾರ ಬಂಧ ಕತ್ತಲೆ ಕೋಣೆಗೆ ಹೋದೀತು ಎನ್ನುವ ಭವಿಷ್ಯ ಜಾರಕಿಹೊಳಿ ಸಹೋದರರ ಕುಟುಂಬದ ಬಗ್ಗೆಯೇ ಎನ್ನುವ ಚರ್ಚೆಯೂ ಕೂಡ ನಡೆಯುತ್ತಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!