ಫಲಿತಾಂಶಕ್ಕೂ ಮುನ್ನ ಮೋದಿಗೆ ಪ್ರಮಾಣ ವಚನಕ್ಕೆ ಆಹ್ವಾನ!

Published : Apr 25, 2019, 09:06 AM IST
ಫಲಿತಾಂಶಕ್ಕೂ ಮುನ್ನ ಮೋದಿಗೆ ಪ್ರಮಾಣ ವಚನಕ್ಕೆ ಆಹ್ವಾನ!

ಸಾರಾಂಶ

ಫಲಿತಾಂಶಕ್ಕೂ ಮುನ್ನ ಮೋದಿಗೆ ಪ್ರಮಾಣ ವಚನಕ್ಕೆ ಆಹ್ವಾನ! ಅಷ್ಟಕ್ಕೂ ಆಹ್ವಾನ ನೀಡಿದ್ದು ಯಾರು? ಇಲ್ಲಿದೆ ವಿವರ

ನವದೆಹಲಿ[ಏ.25]: ರಾಜಕೀಯ ಕೆಸರೆರಚಾಟದಲ್ಲಿ ಏನು ಬೇಕಾದರೂ ಆಗಬಹುದು. ಇತ್ತೀಚೆಗೆ ಒಡಿಶಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಒಡಿಶಾದ ನವೀನ್‌ ಪಟ್ನಾಯಕ್‌ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

ಈ ಬಾರಿ ಯಾರಿಗೂ ಬಿಜೆಡಿಯನ್ನು ಕಾಪಾಡಲು ಸಾಧ್ಯವಾಗದು ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಿಎಂ ಪಟ್ನಾಯಕ್‌, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ತಾವು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಮೋದಿಗೆ ಆಹ್ವಾನ ನೀಡುವ ಮೂಲಕ ಟಾಂಗ್‌ ನೀಡಿದ್ದಾರೆ.

ರಾಜ್ಯದಲ್ಲಿ ಮೊದಲ 3 ಹಂತದ ಚುನಾವಣೆಯಲ್ಲೇ ನಾವು ಸರ್ಕಾರ ರಚನೆಗೆ ಅಗತ್ಯವಾದ ಸ್ಥಾನ ಪಡೆದುಕೊಂಡಿದ್ದೇವೆ. ಹೀಗಾಗಿ ಮೋದಿ ಅವರಿಗೆ ಆಹ್ವಾನ ನೀಡುತ್ತಿದ್ದೇನೆ ಎಂದು ಕಾಲೆಳೆದಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!