ಪ್ರಧಾನಿ ಕಿರೀಟ ಯಾರಿಗೆ..? ಎಲೆಕ್ಷನ್ ಭವಿಷ್ಯ ನುಡಿದ ಕೋಡಿಶ್ರೀ..!

Published : Mar 12, 2019, 03:58 PM ISTUpdated : Mar 12, 2019, 04:17 PM IST
ಪ್ರಧಾನಿ ಕಿರೀಟ ಯಾರಿಗೆ..? ಎಲೆಕ್ಷನ್  ಭವಿಷ್ಯ ನುಡಿದ ಕೋಡಿಶ್ರೀ..!

ಸಾರಾಂಶ

ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಸಮೀಕ್ಷೆಗಳ ಜತೆಗೆ ಕೋಡಿಮಠ ಶ್ರೀಗಳು ಭವಿಷ್ಯ ನುಡಿಯುತ್ತಿದ್ದಾರೆ. ಹಾಗಾದ್ರೆ ಕೋಡಿಶ್ರೀ ಭವಿಷ್ಯದಲ್ಲೇನಿದೆ? ನೋಡಿ. 

ಯಾದಗಿರಿ, (ಮಾ.12): ಲೋಕಸಭಾ ಚುನಾವಣೆಗೂ ಮುನ್ನ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ. 

2018 ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಇದೇ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಅದರಂತೆ ಈಗ ಕುಮಾರಸ್ವಾಮಿ ಸಿಎಂ ಕುರ್ಚಿ ಮೇಲೆ ಕೂತಿದ್ದಾರೆ.

ಮತ್ತೆ ಮೋದಿ ಸರ್ಕಾರ - ಬಿಜೆಪಿಗೆ ಗೆಲುವು : ಸಮೀಕ್ಷೆ

ಇದೀಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೊಂದು ಭವಿಷ್ಯ ನುಡಿದಿದ್ದು, ಪರೋಕ್ಷವಾಗಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎನ್ನುವ ರೀತಿಯಲ್ಲಿ ಭವಿಷ್ಯ ನುಡಿದಿದ್ದಾರೆ.

ಯಾದಗಿರಿಯಲ್ಲಿ ಸೋಮವಾರ ಶ್ರೀ ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ ಕೋಡಿಶ್ರೀಗಳು, "ಪಾಂಡವರು ಮತ್ತು ಕೌರವರು ಬಡಿದಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ. ಬೇವು ಬೆಲ್ಲವಾದೀತು, ಸತ್ಯ ವಿಷದಂತೆ ಇರುತ್ತದೆ" ಎನ್ನುವ ಭವಿಷ್ಯ ನುಡಿದಿದ್ದಾರೆ.

"ಪಾಂಡವರು ಮತ್ತು ಕೌರವರು ಬಡಿದಾಡುವರು" ಅಂದ್ರೆ ಮಹಾಘಟಬಂಧನ್ ನಾಯಕರು ಕಿತ್ತಾಡುವರು, ರತ್ನಖಚಿತ ಸುವರ್ಣ ಕಿರೀಟ ಸ್ಥಿರವಾಗಿರುತ್ತದೆ ಎನ್ನುವುದು ನೋಡಿದ್ರೆ ಮೋದಿಗೆ ಪ್ರಧಾನಿ ಹುದ್ದೆ ಸ್ಥಿರವಾಗಿರುತ್ತದೆ ಎಂದರ್ಥ ನೀಡುತ್ತದೆ. 

ಇದೇ ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಭವಿಷ್ಯ ಏನಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!