ಕರ್ನಾಟಕದ ಮೊದಲ ಹಂತದ ಮತದಾನ: ಯಾವ-ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ವೋಟಿಂಗ್..?

By Web Desk  |  First Published Apr 18, 2019, 9:51 PM IST

ದೇಶದ 2ನೇ ಹಂತದಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಇಂದು (ಗುರುವಾರ) ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ನಡೆದ ಮೊದಲ ಹಂತ ಮತದಾನ ಅಂತ್ಯವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಹಾಗಾದ್ರೆ 14 ಕ್ಷೇತ್ರಗಳ ಶೇಕಡವಾರು ಮತದಾನ ಎಷ್ಟಾಗಿದೆ? ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


ಬೆಂಗಳೂರು, (ಏ.18): 17ನೇ ಲೋಕಸಭಾ ಚುನಾವಣೆಯ ದೇಶದ 2ನೇ ಹಂತದ ಮತದಾನ ಅಂತ್ಯವಾಗಿದ್ದು, ಕರ್ನಾಟಕದಲ್ಲಿ ಮೊದಲ ಹಂತದ 14 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ

ಕರ್ನಾಟಕದಲ್ಲಿ 14 ಕ್ಷೇತ್ರಗಳ ಒಟ್ಟಾರೆ ಶೇಕಡಾ 67.67 ಮತದಾನ ಆಗಿದೆ.  28 ಕ್ಷೇತ್ರಗಳ ಪೈಕಿ ಇಂದು (ಗುರುವಾರ) ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ನಡೆದ ಮೊದಲ ಹಂತ ಮತದಾನ ಕೆಲ ಕ್ಷೇತ್ರಗಳಲ್ಲಿ ಗಲಾಟೆ ನಡೆದಿರುವುದು ಬಿಟ್ಟರೆ ಇನ್ನುಳಿದಂತೆ ಶಾಂತಿಯುತವಾಗಿ ಅಂತ್ಯವಾಗಿದೆ.

Latest Videos

undefined

ಎರಡನೇ ಹಂತ ಮುಕ್ತಾಯ: ಮೂರನೇ ಹಂತಕ್ಕೆ ಕಾಯುತ್ತಿದೆ ಭಾರತ!

 17ನೇ (2019) ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ವೋಟಿಂಗ್ ಶೇಕಡವಾರು 
1.ಕೋಲಾರ:75.94%, 2.ದಕ್ಷಿಣ ಕನ್ನಡ: 77.7%, 3.ಚಾಮರಾಜನಗರ: 73.45%, 4.ಮಂಡ್ಯ: 80.23%, 5.ಚಿಕ್ಕಬಳ್ಳಾಪುರ: 76.14%, 6.ಹಾಸನ: 77.28% , 7.ಉಡುಪಿ -ಚಿಕ್ಕಮಗಳೂರು: 75.26%, 8.ತುಮಕೂರು: 77.01%, 9.ಚಿತ್ರದುರ್ಗ: 70.59%, 10.ಮೈಸೂರು : 68.72 %, 11.ಬೆಂಗಳೂರು ಗ್ರಾಮಾಂತರ: 64.09%, 12.ಬೆಂಗಳೂರು ದಕ್ಷಿಣ: 54.12%, 13. ಬೆಂಗಳೂರು ಉತ್ತರ:50.51%, 14.ಬೆಂಗಳೂರು ಸೆಂಟ್ರಲ್: 49.75%.

Voter turnout in Karnataka for 2nd phase of :
Udupi Chikmagalur - 75.26%
Hassan - 77.28%
Dakshina Kannada - 77.7%
Chitradurga - 70.59% https://t.co/wKo2gDIZou

— ANI (@ANI)

 16ನೇ (2014) ಲೋಕಸಭಾ ಚುನಾವಣೆ ಮತದಾನದ ಶೇಕಡವಾರು
1.ಬೆಂಗಳೂರು ಕೇಂದ್ರ-55.64 %, 2.ಬೆಂಗಳೂರು ಉತ್ತರ-56.53 %, 3.ಬೆಂಗಳೂರು ದಕ್ಷಿಣ-55.75 %, 4. ಬೆಂಗಳೂರು ಗ್ರಾಮಾಂತರ-66.45 %, 5. ದಕ್ಷಿಣ ಕನ್ನಡ: 72.97%, 6. ಉಡುಪಿ-ಚಿಕ್ಕಮಗಳೂರು-74.56 %,  7.ತುಮಕೂರು-72.57 %,  8.ಚಿಕ್ಕಬಳ್ಳಾಪುರ-76.21 %, 9.ಕೋಲಾರ-75.51 %
10. ಮೈಸೂರು- 67.30 %, 11.ಮಂಡ್ಯ-67.30%, 12.ಹಾಸನ-71.20%, 13.ಚಿತ್ರದುರ್ಗ-66.07 %, 14.ಚಾಮರಾಜನಗರ-72.85 %

ಬೆಂಗಳೂರಿಗರೇ ಮತ್ತೊಮ್ಮೆ ವೀಕ್..!
ಹೌದು...ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರಿನಲ್ಲಿ ಕಡಿಮೆ ಮತದಾನ ಪ್ರಮಾಣ ದಾಖಲಾಗಿದೆ. ವಿದ್ಯಾಂವತರು, ಬುದ್ಧಿವಂತರು ಅಂತೆಲ್ಲ ಕರೆಸಿಕೊಳ್ಳುವ ಬೆಂಗಳೂರಿಗರು ಮತದಾನ ಮಾಡುವುದರಲ್ಲಿ ವೀಕ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಬಾರಿಯೂ ಕಳಪೆ ಮತದಾನವಾಗಿತ್ತು. ಈ ಬಾರಿಯೂ ಸಹ ಅದೇ ಹಣೆಬರಹ.  ರಜೆ ಸಿಕ್ರೆ ಸಾಕು ಮೋಜು ಮಸ್ತಿ, ಟ್ರಿಪ್-ಶಾಪಿಂಗ್ ಅಂತ  ಹೋಗುವ ಬೆಂಗಳೂರಿಗರಿಗೆ ಎಷ್ಟು  ಮತದಾನದ ಅರಿವು ಮೂಡಿಸಿದ್ರೂ ಅಷ್ಟೇ ಸುಮುದ್ರದಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.

ಮೇ 23ರಂದು ನಾಯಕರ ಭವಿಷ್ಯ ಅನಾವರಣ
ದಕ್ಷಿಣ ಕರ್ನಾಟಕದ ಮೊದಲ ಹಂತದಲ್ಲಿ 14ಕ್ಷೇತ್ರಗಳಿಗೆ ಮತದಾನ ಅಂತ್ಯವಾಗಿದ್ದು, ಇನ್ನುಳಿದಂತೆ ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಇದೇ ಏಪ್ರಿಲ್ 23ರಂದು ನಡೆಯಲಿದೆ. ಬಳಿಕ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಂದು ಮೇ 23ರವರೆಗೆ ಕಾಯಲೇಬೇಕು.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!