ಎಲ್ಲಾ ಅಕ್ರಮ ವಲಸಿಗರನ್ನೂ ಹೊರದಬ್ಬಲಾಗುವುದು: ಪ್ರಧಾನಿ ಮೋದಿ!

Published : Mar 30, 2019, 05:57 PM IST
ಎಲ್ಲಾ ಅಕ್ರಮ ವಲಸಿಗರನ್ನೂ ಹೊರದಬ್ಬಲಾಗುವುದು: ಪ್ರಧಾನಿ ಮೋದಿ!

ಸಾರಾಂಶ

ಅಸ್ಸಾಂ ಅಕಾರ್ಡ್‌ಗೆ ಎನ್‌ಡಿಎ ಸರ್ಕಾರ ಬದ್ಧ ಎಂದ ಪ್ರಧಾನಿ| ಅಸ್ಸಾಂ ನ 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ?| ಧರ್ಮ ಲೆಕ್ಕಿಸದೇ ಎಲ್ಲಾ ಅಕ್ರಮ ವಲಸಿಗರನ್ನೂ ಗಡಿಪಾರು ಮಾಡುವ ಭರವಸೆ| ‘ಅಸ್ಸಾಂ ಒಪ್ಪಂದ ಜಾರಿಗೊಳಿಸಲು ಕೇಂದ್ರ ಸರ್ಕಾರದಿಂದ ಶಕ್ತಿ ಮೀರಿ ಪ್ರಯತ್ನ’|

ಮೊರಾನ್(ಮಾ.30): ಅಸ್ಸಾಂ ಅಕಾರ್ಡ್‌ಗೆ ಎನ್‌ಡಿಎ ಸರ್ಕಾರ ಬದ್ಧವಾಗಿದ್ದು, ಅಸ್ಸಾಂ ನ 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಲು ಗಂಭೀರ ಚಿಂತನೆ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಸ್ಸಾಂನ ಮೊರಾನ್‌ನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅಸ್ಸಾಂ ಒಪ್ಪಂದ ಒಮ್ಮೆ ಜಾರಿಯಾದರೆ ಎಲ್ಲಾ ಅಕ್ರಮ ವಲಸಿಗರನ್ನೂ ಅವರ ಧರ್ಮವನ್ನು ಲೆಕ್ಕಿಸದೇ ರಾಜ್ಯದಿಂದ ಗಡಿಪಾರು ಮಾಡಲಾಗುವುದು ಎಂದು ಭರವಸೆ ನೀಡಿದರು. 

ಕಾಂಗ್ರೆಸ್ ಸ್ಥಗಿತಗೊಳಿಸಿದ್ದ ಅಸ್ಸಾಂ ಒಪ್ಪಂದವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದ ಮೋದಿ, ಅಸ್ಸಾಂ ನ ಸಂಸ್ಕೃತಿ ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ನಾವು ಶ್ರಮಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!