‘20 ಸ್ಥಾನ ಗಳಿಸದಿದ್ದರೆ ಪಾರ್ಲಿಮೆಂಟ್ ಗೆ‌ ಹೋಗಿ ಮುಖತೊರಿಸೋಕೆ ಆಗುತ್ತಾ?’

By Web DeskFirst Published Apr 2, 2019, 9:18 PM IST
Highlights

ಹಾಸನದಲ್ಲಿ ಮೊಮ್ಮಗನ ಪರವಾಗಿ ಪ್ರಚಾರ ಮಾಡಿದ ದೇವೇಗೌಢರು ರಾಷ್ಟ್ರೀಯ ಮಟ್ಟದ ಅನೇಕ ವಿಚಾರಗಳನ್ನು ಮಾತನಾಡಿದರು. 

ಹಾಸನ[ಏ. 02]  ನನ್ನ ಪ್ರಧಾನಿ ಹುದ್ದೆ ಹೋದಾಗ ನಗು ನಗುತ್ತಾ ಹೊರಗೆ ಬಂದೆ. ವಾಜಪೇಯಿ ಬೆಂಬಲ ನೀಡುವ ಪತ್ರ ಕಳಿಸಿದ್ರು. ಆದ್ರೆ ನಾನು ನಮಸ್ಕಾರ ಸ್ವಾಮಿ ಎಂದೆ. ಒಂದು ವೇಳೆ ನಾನು ಅಧಿಕಾರಕ್ಕಾಗಿ ಆಸೆಪಟ್ಟಿದ್ರೆ ಇಷ್ಟು ಎದೆಗಾರಿಕೆಯಿಂದ ಒಬ್ಬ ಕನ್ನಡಿಗನಾಗಿ ಇರುತ್ತಿರಲಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಗೆಂಡೆಹಳ್ಳಿಯಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಗೌಡರು, ಹತ್ತು ವರ್ಷ ಯಾರೂ ಕಾಶ್ಮೀರಕ್ಕೆ ಹೋಗದಿದ್ದಾಗ ಐದು ಬಾರಿ ಹೋದೆ. ಯಾರು ನನ್ನ ಹೊಡಿಲಿಲ್ಲ. ಅಲ್ಲಿಗೆ ಏನು ಬೇಕೋ ಅದನ್ನೆಲ್ಲ ಮಾಡಿದೆ. ಸಾಲಮನ್ನಾ ಮಾಡಿದೆ. 280  ಸ್ಥಾನ ಗೆದ್ದ ಮೋದಿ ಹೇಗೆ ಆಡಳಿತ ಮಾಡಬಹುದಿತ್ತು? ಎಂದು ಪ್ರಶ್ನೆ ಮಾಡಿದರು.

ಶಿವರಾಮೇಗೌಡರ ‘ನಾಯ್ಡು’ ಹೇಳಿಕೆಗೆ ದರ್ಶನ್ ಚಾಲೆಂಜಿಂಗ್ ಕೌಂಟರ್

ಮೋದಿ ಅಧಿಕಾರಕ್ಕೆ ಬಂದು ಮೊದಲ ವರ್ಷ ಸಿಪಾಯಿಗಳ ಜೊತೆ ದೀಪಾವಳಿ ಮಾಡಿದ್ರು. ಆದರೆ ಈಗ ಏನಾಗಿದೆ?  ಕಾಶ್ಮೀರದಲ್ಲಿ ನಾಲ್ಕು ಸರ್ಕಾರ ಬದಲಾಯಿಸಿದ್ರು. ಬಿಜೆಪಿಯವರನ್ನೇ ಕೇಳುತ್ತೇನೆ ದೇವೇಗೌಡ ಇದ್ದಾಗ ಗಲಾಟೆ ಆಯ್ತಾ? ಎಂದು ಪ್ರಶ್ನೆ ಮಾಡಿದರು.

ಇದು ಯಾವುದೇ ಒಂದು ಧರ್ಮದ ದೇಶ ಅಲ್ಲ. ಏನು 40 ಕೋಟಿ ಮುಸ್ಲಿಂರನ್ನ ಓಡಿಸ್ತೀರಾ? 15 ಕೋಟಿ ಕ್ರಿಶ್ಚಿಯನ್‌ ರನ್ನು, ಮೂರು ಕೋಟಿ ಸಿಖ್ ರನ್ನು ದೇಶದಿಂದ ಓಡಿಸುತ್ತೀರಾ? ಎಂದು ಪ್ರಶ್ನೆ ಎಸೆದರು.

ಸಿಖ್ ಧರ್ಮ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ ,ಜೈನ್ ಧರ್ಮ ಇಲ್ಲವೇ ಇಲ್ಲಿ. ಹಿಂದೂ ದೇಶ ಮಾಡ್ತೀವಿ ಎಂದು ನೀವು ಕೊಟ್ಟ ಶಿಕ್ಷೆ ಏನು ಎಂದು ನನಗೆ ಗೊತ್ತಿದೆ ಎಂದು ಮೋದಿ ಅವರ ಮೇಲೆ ನಿರಂತರ ಆರೋಪ ಮಾಡಿದರು.

ಐಟಿ ದಾಳಿಯ ಅಸಲಿ ಸೂತ್ರದಾರ ದೇವೇಗೌಡರ ಸಾಮ್ರಾಜ್ಯದ ನೆರಳಲ್ಲಿಯೇ ಇದ್ದ!

ಇವತ್ತು ಪ್ರಜ್ವಲ್ ಎಂಪಿ ಮಾಡೋ ಪ್ರಶ್ನೆ ಅಲ್ಲ.  28 ರಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲು ಈ ವಯಸ್ಸಿನಲ್ಲಿಯೂ ಹೋರಾಟ ಮಾಡುತ್ತೇನೆ. ಈ ದೇಶದಲ್ಲಿ ಇರೋ ಮುಸಲ್ಮಾನರು ಭಯೋತ್ಪಾದಕರಾ? ಆಡಳಿತ ಸರಿಯಾಗಿದ್ರೆ ಹೊರಗಡೆಯಿಂದ ಏಕೆ‌ ನುಸುಳಿ ಬರ್ತಾರೆ? ಭಯೋತ್ಪಾದನೆ ತಡೆಯುವಲ್ಲಿ‌‌ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ರೇವಣ್ಣ ಹುಚ್ಚನಂತೆ ಕೆಲಸ ಮಾಡ್ತಾನೆ. ಸಿಟ್ಟಿದೆ ಅನ್ನೋದು ಬಿಟ್ರೆ, ಯಾರೇ  ಸಿಎಂ‌ ಇರ್ಲಿ ಹೋಗಿ ಕೂತು ಸಹಿಮಾಡಪ್ಪಾ ಅಂತಾ ಮಾಡಿಸ್ತಾರೆ. ನನಗಿಂತ ನೂರುಪಟ್ಟು ಕೆಲಸ ಮಾಡಿದ್ದಾರೆ ಎನ್ನುತ್ತ ಪುತ್ರ ರೇವಣ್ಣರ ಅಭಿವೃದ್ಧಿ ಕಾರ್ಯಕ್ಕೆ ದೇವೇಗೌಡರು ಶಹಭಾಸ್ ನೀಡಿದರು.

ನಾನು ಮಾಜಿ ಪ್ರಧಾನಿಯಾಗಿ 28 ರಲ್ಲಿ  20 ಸ್ಥಾನವನ್ನಾದ್ರೂ ಗಳಿಸದಿದ್ದರೆ ಪಾರ್ಲಿಮೆಂಟ್ ಗೆ‌ ಹೋಗಿ ಮುಖತೊರಿಸೋಕೆ ಆಗುತ್ತಾ? ಅದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಈ ದೇಶದಲ್ಲಿ ಮುಂದೆ ಹೇಗೆ ಕೆಲಸ ಮಾಡಬೇಕು. ಎಂಪಿಯಾಗಿ ಮಾಡಬೇಕೋ ಅಥವಾ ಇನ್ನೇನಾದ್ರು ಜವಾಬ್ದಾರಿನೋ ಇದನ್ನ ಮೇಲಿರೊ ಮಹಾನುಭಾವ ತೀರ್ಮಾನ ಮಾಡುತ್ತಾನೆ ಎಂದು ಹೇಳುವ ಮುಖೇನ ತಾವು ಮತ್ತೊಮ್ಮೆ ಪ್ರಧಾನಿ ರೇಸ್ ನಲ್ಲಿ ಇದ್ದೇನೆ ಎಂಬುದನ್ನು ಸೂಚ್ಯವಾಗಿ ಹೇಳಿದರು.

click me!