
ಮಂಡ್ಯ : ಮಂಡ್ಯದಿಂದ ಸುಮಲತಾ ಅಂಬರೀಶ್ ಕಣಕ್ಕೆ ಇಳಿಯುವುದು ಖಚಿತವಾದಂತಾಗಿದೆ. ಆದರೆ ಇನ್ನೂ ಕೂಡ ಪಕ್ಷ ಮಾತ್ರ ಖಚಿತವಾಗಿಲ್ಲ. ಸುಮಲತಾ ವಿರುದ್ಧವಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದು, ಜೆಡಿಎಸ್ ಬೆಂಬಲಿಗರು ಸುಮಲತಾ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಸುಮಲತಾ ಅಂಬರೀಶ್ ಬೆಂಬಲಿಗರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಹಿಂದೆ ಸರಿಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ‘ನಿಖಿಲ್ ಗೋ ಬ್ಯಾಕ್’ ಚಳವಳಿ ಆರಂಭಿಸಿದ್ದರು.
ಇದೀಗ ಜೆಡಿಎಸ್ ಬೆಂಬಲಿಗರು ‘ಸುಮಲತಾ ಗೋ ಬ್ಯಾಕ್’ ಚಳವಳಿ ಪ್ರಾರಂಭಿಸಿದ್ದಾರೆ. ‘ಕುಮಾರಣ್ಣನ ಬಿಟ್ಟುಕೊಡೋಕೆ ಸಾಧ್ಯನೇ ಇಲ್ಲ. ಗೋ ಬ್ಯಾಕ್ ಸುಮಲತಾ’ ಎಂದು ಪೋಸ್ಟ್ ಮಾಡಿದ್ದಾರೆ.