ವಡಕ್ಕನ್‌ ದೊಡ್ಡ ನಾಯಕನಲ್ಲ: ರಾಹುಲ್

Published : Mar 16, 2019, 09:50 AM IST
ವಡಕ್ಕನ್‌ ದೊಡ್ಡ ನಾಯಕನಲ್ಲ: ರಾಹುಲ್

ಸಾರಾಂಶ

ಬಿಜೆಪಿಗೆ ಸೋನಿಯಾ ಆಪ್ತ ವಡಕ್ಕನ್ ಸೇರ್ಪಡೆ| ವಡಕ್ಕನ್‌ ದೊಡ್ಡ ನಾಯಕನಲ್ಲ: ಬಿಜೆಪಿ ಸೇರ್ಪಡೆ ಬಗ್ಗೆ ರಾಹುಲ್‌ ವ್ಯಂಗ್ಯ

 

ರಾಯ್‌ಪುರ[ಮಾ.16]: ಕಾಂಗ್ರೆಸ್‌ ತ್ಯಜಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಟಾಮ್‌ ವಡಕ್ಕನ್‌ ಬಿಜೆಪಿಗೆ ಸೇರ್ಪಡೆಯಾದ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮೌನ ಮುರಿದಿದ್ದಾರೆ.

ವಡಕ್ಕನ್‌ ಅವರು ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಪಕ್ಷದ ಮೇಲಾಗುವ ಪರಿಣಾಮವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ರಾಹುಲ್‌ ಗಾಂಧಿ ಅವರು, ‘ವಡಕ್ಕನ್‌ ಅವರೇನು ದೊಡ್ಡ ನಾಯಕರಲ್ಲ’ ಎಂದು ವ್ಯಂಗ್ಯವಾಡಿದರು.

‘ದೇಶದಲ್ಲಿ ಮೂರು ಸಮಸ್ಯೆಗಳಿವೆ. 1) ನಿರುದ್ಯೋಗ, ನರೇಂದ್ರ ಮೋದಿ ಅವರ ವೈಫಲ್ಯತೆ, 2) ಭ್ರಷ್ಟಾಚಾರ ಮತ್ತು 3) ರೈತರ ಸಮಸ್ಯೆ ಎಂಬ ಅಂಶಗಳನ್ನಿಟ್ಟುಕೊಂಡು ತಾವು ಮೋದಿ ಮತ್ತು ಬಿಜೆಪಿ ವಿರುದ್ಧ ಹೋರಾಡುತ್ತಿರುವುದಾಗಿ’ ರಾಹುಲ್‌ ತಿಳಿಸಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!